ಬಾಂಗ್ಲಾದೇಶಿಗಳಿಗೆ ಆಧಾರ್ ಕಾರ್ಡ್‌; ಕೇಂದ್ರದತ್ತ ಬೊಟ್ಟು ಮಾಡಿದ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಬಾಂಗ್ಲಾದೇಶಿಗಳಿಗೆ 1,500 ರೂ.ಗೆ ಆಧಾರ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ ಎಂಬ ಆರೋಪ ಬಗ್ಗೆ ಕಾಂಗ್ರೆಸ್ ಬಿಜೆಪಿ ನಾಯಕರ ನಡುವೆ ವಾಕ್ಸಮರ ತಾರಕಕ್ಕೇರಿದೆ.

ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸಿ.ಟಿ.ರವಿ, “ಅಕ್ರಮ ವಲಸಿಗರು ರಾಜ್ಯಕ್ಕೆ ಮಾರಕವಾಗಬಹುದು ಎಂಬುದನ್ನು ಕಾಂಗ್ರೆಸ್ ಅರಿಯದಿರುವುದು ದುರಾದೃಷ್ಟಕರ. ನಿಮ್ಮ ಓಟಿನ ಆಸೆಗಾಗಿ ದೇಶದ ಆಂತರಿಕ ಸುರಕ್ಷತೆಯೊಂದಿಗೆ ಆಟವಾಡಬೇಡಿ” ಎಂದು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದೇ ವೇಳೆ, ಬಿಜೆಪಿ ನಾಯಕ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, “ಮೊದಲು, ಬಾಂಗ್ಲಾದೇಶಿಗಳು ದೇಶವನ್ನು ಹೇಗೆ ಪ್ರವೇಶಿಸುತ್ತಿದ್ದಾರೆಂದು ಹೇಳಿ ಎಂದು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದ್ದಾರೆ.

ಗಡಿ ಕಾಯುವುದು ಜಿ ಪರಮೇಶ್ವರ ಅವರ ಕೆಲಸವೇ? ಅಮಿತ್ ಶಾ ಕಡಲೆಕಾಯಿ ತಿನ್ನುತ್ತಾರೋ ಅಥವಾ ಏನು? ಅವರು ಬಿಜೆಪಿ ಆಡಳಿತದ ರಾಜ್ಯಗಳನ್ನು ದಾಟಿ ಕರ್ನಾಟಕವನ್ನು ಹೇಗೆ ತಲುಪುತ್ತಿದ್ದಾರೆ? ಎಂದು ಪ್ರಿಯಾಂಕ್ ಖರ್ಗೆಪ್ರಶ್ನಿಸಿದ್ದಾರೆ.

“ಮಹದೇವಪುರದಲ್ಲಿ, ಬಿಜೆಪಿಯ ಮಾಜಿ ಶಾಸಕರೊಬ್ಬರು ಸಾರ್ವಜನಿಕ ಜಾಗೃತಿ ಅಭಿಯಾನವನ್ನು ನಡೆಸಿದರು. ಬಾಂಗ್ಲಾದೇಶಿಗಳು ಆಧಾರ್ ಕಾರ್ಡ್‌ಗಳನ್ನು ಪಡೆದು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಈಗಾಗಲೇ ರಾಷ್ಟ್ರೀಯ ಚಾನೆಲ್‌ಗಳಲ್ಲಿ ಬಂದಿದೆ. ನೀವು ಈ ಪ್ರಶ್ನೆಗಳನ್ನು ಬಿಜೆಪಿ ಶಾಸಕರು ಮತ್ತು ಬಿಜೆಪಿ ನಾಯಕತ್ವಕ್ಕೆ ಕೇಳಬೇಕು, ನಮಗಲ್ಲ” ಎಂದು ಪ್ರಿಯಾಂಕ್ ಖರ್ಗೆಹೇಳಿದ್ದಾರೆ.

Related posts