ರಫೇಲ್‌ ಒಪ್ಪಂದ ಹೇಳಿಕೆ ವಿವಾದ ; ರಾಹುಲ್‌ ಕ್ಷಮೆ ಯಾಚನೆಗೆ ಬಿಜೆಪಿ ಪಟ್ಟು

ಬೆಂಗಳೂರು: ರಫೇಲ್‌ ಒಪ್ಪಂದ ಕುರಿತಾದ ಹೇಳಿಕೆ ಕುರಿತಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಪಟ್ಟು ಹಿಡಿದಿದೆ. ಈ ಸಂಬಂಧ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ. ರ

ಫೇಲ್ ಡೀಲ್ ಕುರಿತಾಗಿ ತನಿಖೆ ಅನಗತ್ಯ ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ. ರಫೇಲ್‌ ಒಪ್ಪಂದ ವಿಚಾರದಲ್ಲಿ ರಾಹುಲ್‌ ಗಾಂಧಿ ಸುಳ್ಳು ಮಾಹಿತಿ ನೀಡಿದ್ದ­ರಿಂದ ಕೋರ್ಟ್‌ ಅವರಿಗೆ ಛೀಮಾರಿ ಹಾಕಿದೆ. ಹಾಗಾಗಿ ರಾಹುಲ್‌ ಗಾಂಧಿ ಕ್ಷಮೆ ಕೇಳುವಂತೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ತಿಳಿಸಿದ್ದಾರೆ.

ಭಾರತಕ್ಕೆ ರಫೇಲ್ ಜೆಟ್ ವಿಮಾನಗಳ ಪೂರೈಕೆ ವಿಚಾರವಾಗಿ ನಡೆದಿದ್ದ ಒಪ್ಪಂದದಲ್ಲಿ ಅವ್ಯವಹಾರ ನಡೆದಿದ್ದು, 59 ಸಾವಿರ ಕೋಟಿ ರೂ. ಒಪ್ಪಂದದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಲಾಗಿತ್ತು. ವಿಚಾರಣೆ ನಡೆಸಿದ ಸುಪ್ರೀಂ, 2018ರ ಡಿಸೆಂಬರ್ 14ರಂದು ನರೇಂದ್ರ ಮೋದಿ ಸರಕಾರಕ್ಕೆ ಕ್ಲೀನ್ ಚಿಟ್ ನೀಡಿತ್ತು.  ಈ ತೀರ್ಪಿನ ವಿರುದ್ದದ ಮರುಪರಿಶೀಲನಾ ಅರ್ಜಿಯನ್ನು ಗುರುವಾರ ವಿಲೇವಾರಿ ಮಾಡಿದ ಸುಪ್ರೀಂ ಕೋರ್ಟ್, ರಫೇಲ್ ಒಪ್ಪಂದದ ಕುರಿತಾಗಿ ತನಿಖೆಯ ಅಗತ್ಯವಿಲ್ಲ ಎಂದು ಪುನಃ ಸ್ಪಷ್ಟಪಡಿಸಿತು.

Uncategorized

Related posts