ಬೆಂಗಳೂರು: ಕೊರೋನಾ ವೈರಾಣು ಇಡೀ ದೇಶವನ್ನು ತತ್ತರಗೊಳ್ಳುವಂತೆ ಮಾಡಿದೆ. ಅದರಲ್ಲೂ ಕರ್ನಾಟಕದಲ್ಲಿ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಸೋಂಕಿತರ ಹೆಸರುಗಳು ಪಟ್ಟಿಯನ್ನು ಸೇರುತ್ತಿವೆ.
ಇದನ್ನೂ ಓದಿ.. ಬಿಲ್ ವಾರ್ ; ಪ್ರಭಾವಿಗಳ ಬವರಿಳಿಸಿದ ಕನ್ನಡತಿ ಐಪಿಎಸ್ ಅಧಿಕಾರಿ
ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ, ಶಾಸಕ ರಿಜ್ವನ್ ಅರ್ಷದ್ ಮಾಡಿರುವ ಟ್ವೀಟ್ ಪರಿಸ್ಥಿತಿಯ ವೈಚಿತ್ರ್ಯದತ್ತ ಬೊಟ್ಟು ಮಾಡಿದೆ.
ಅಂದು ಕೊರೋನಾ ಸೋಂಕಿತರ ಸಂಖ್ಯೆ 1 ಸಾವಿರಕ್ಕೂ ಕಡಿಮೆ ಇದ್ದಾಗ ಇಡೀ ದೇಶವನ್ನೇ ಲಾಕ್ ಮಾಡಲಾಗಿತ್ತು; ಇದೀಗ ಸೋಂಕಿತರ ಸಂಖ್ಯೆ 10 ಲಕ್ಷ ದಾಟಿದಾಗ ಬಾಯಿಗಳಿಗೆ ಬೀಗ ಹಾಕಲಾಗಿದೆ ಎಂದು ಶಾಸಕ ರಿಜ್ವನ್ ಅರ್ಷದ್ ಅವರು ಟ್ವೀಟ್ ಮಾಡಿದ್ದಾರೆ.
After all, Karnataka's Health Minister Sriramulu was right when he said "Only God can save us”#BJPfailsCoronaFight pic.twitter.com/kMNHOptXst
— Rizwan Arshad (@ArshadRizwan) July 23, 2020
ಈ ಟ್ವೀಟ್ ಬಗ್ಗೆ ಹಲವಾರು ಪ್ರತಿಕ್ರಿಯಿಸಿದ್ದು ಬಿಜೆಪಿ ಬೆಂಬಲಿಗರು ಆಕ್ರೋಶ ಹೊರ ಹಾಕಿದ್ದಾರೆ. ‘ಇಂತಹ ಸಮಯದಲ್ಲಿ ಈ ರೀತಿಯ ಟೀಕೆ ಮಾಡೋದು ಎಷ್ಟು ಸರಿ.. ದೇಶದಲ್ಲಿ ಕೂರೋನಾ ವಿರುದ್ಧ ಪಕ್ಷಾತೀತವಾಗಿ ಹೋರಾಡೋದು ನಮ್ಮೆಲ್ಲರ ಮೂಲ ಹಕ್ಕು.. ಅದನ್ನೆಲ್ಲ ಮರೆತು ಈ ರೀತಿಯ ಫೋಟೋ ಹಾಕಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇಂತಹ ಸಮಯದಲ್ಲಿ ಈ ರೀತಿಯ ಪ್ರಧಾನಿ ಬಗ್ಗೆ ಟೀಕೆ ಮಾಡೋದು ಎಷ್ಟು ಸರಿ… ದೇಶದಲ್ಲಿ ಕೂರೋನಾ ವಿರುದ್ಧ ಪಕ್ಷಾತೀತವಾಗಿ ಹೋರಾಡೋದು ನಮ್ಮೆಲ್ಲರ ಮೂಲ ಹಕ್ಕು.. ಅದನ್ನೆಲ್ಲ ಮರೆತು ಈ ರೀತಿಯ ಫೋಟೋ ಹಾಕಿ ನಿಮ್ಮ ವಿಚಾರ ಎಷ್ಟು ಕೆಳಮಟ್ಟ ಇದೆ ಅಂತಾ ಗೊತ್ತಾಗುತ್ತದೆ..@ArshadRizwan @CTRavi_BJP @BJP4Karnataka
— #Prasanna Deshpande ( Modi Ka pariwar ) (@PrasannaDeshpa8) July 23, 2020
ಇದನ್ನೂ ಓದಿ.. ಬಿಲ್ ಪ್ರಯೋಗ; ಸಚಿವ ಸುಧಾಕರ್ ಕೆಂಡಾಮಂಡಲ