ಕಿಲ್ಲರ್ ಕೊರೋನಾಗೆ ಖ್ಯಾತ ಬಾಲಿವುಡ್ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನರಾಗಿದ್ದಾರೆ. ಅವರಿಗೆ 42 ವರ್ಷ ವಯಸ್ಸಿನ ಅವರು ಕೊರೋನಾ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಕೆಲ ದಿನಗಳ ಹಿಂದೆ ಅರೋಗ್ಯ ಏರುಪೇರಾದ ಹಿನ್ನೆಲೆಯಲ್ಲಿ ವಾಜಿದ್ ಖಾನ್ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆಗೊಳಪಡಿಸಿದಾಗ ಅವರಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿತ್ತು. ಬರಬರುತ್ತಾ ಆರೋಗ್ಯ ವಿಷಮ ಸ್ಥಿತಿಯತ್ತ ತಲುಪಿದ್ದರಿಂದಾಗಿ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಕೆಲವೇ ತಿಂಗಳ ಹಿಂದಷ್ಟೇ ಅವರು ಕಿಡ್ನಿ ಕಸಿಗೆ ಒಳಗಾಗಿದ್ದರು. ಈ ರೀತಿ ಆರೋಗ್ಯ ಏರುಪೇರಾಗಿ ಅವರು ಕೊನೆಯುಸಿರೆಳೆದರೆಂದು ಹೇಳಲಾಗುತ್ತಿದೆ.
ಗಾಯಕರಾಗಿಯೂ ಖ್ಯಾತಿಯ ಶಿಖರಕ್ಕೇರಿದ್ದರು. ಸಾಜಿದ್-ವಾಜಿದ್ ಜೋಡಿ ಬಾಲಿವುಡ್ ಲೋಕದಲ್ಲಿ ತನ್ನದೇ ಆದ ಖ್ಯಾತಿಯನ್ನು ಹೊಂದಿತ್ತು.’ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಿದ್ದ ಅವರು ಅನೇಕ ಸಿನಿಮಾ ಹಾಡುಗಳಿಗೆ ಸಹೋದರ ಸಾಜಿದ್ ಖಾನ್ ಜೊತೆಗೆ ಸೇರಿ ಸಂಗೀತ ಸಂಯೋಜಿಸಿದ್ದರು. ಸಾಜಿದ್-ವಾಜಿದ್ ಖ್ಯಾತಿ ಸಂಗೀತ ಮಾಂತ್ರಿಕ ಎಂದೇ ವಾಜಿದ್ ಖಾನ್ ಗುರುತಾಗಿದ್ದರು.
ಇದನ್ನೂ ಓದಿ.. ಕಿಲ್ಲರ್ ಕೊರೋನಾ ಸೋಂಕಿತರಿರುವ ದೇಶಗಳ ಪಟ್ಟಿಯಲ್ಲಿ ಭಾರತ 7ನೇ ಸ್ಥಾನ