ಸಾಕಷ್ಟು ಕುತೂಹಲ ಸೃಷ್ಟಿಸುತ್ತಿದೆ ‘ಶಾರ್ದೂಲ’ ಟ್ರೇಲರ್

ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಚಿತಾರಾಮ್, ಹೀಗೆ ಸಾಕಷ್ಟು ಹೊಸ ಪ್ರತಿಭೆಗಳನ್ನು ಬೆಳ್ಳಿ ತೆರೆಗೆ ಪರಿಚಯಿಸಿರುವ ಅರವಿಂದ್ ಕೌಶಿಕ್ ಇದೀಗ ‘ಶಾರ್ದೂಲ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ತೆರೆ ಕಾಣಲು ಸಿದ್ದವಾಗಿರುವ ‘ಶಾರ್ದೂಲ’ ಚಿತ್ರದ ಟ್ರೇಲರ್ ಬಿಡುಗರೆಯಾಗಿದ್ದು ಈ ಸಿನಿಮಾ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ.

ಕಲ್ಯಾಣ್ ಮತ್ತು ರೋಹಿತ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ರವಿತೇಜ, ಚೇತನ್ ಚಂದ್ರ , ಐಶ್ವರ್ಯಾ, ಕೃತಿಕಾ ರವೀಂದ್ರ ಮೊದಲಾದ ನಟ ನಟಿಯರ ಬಳಗ ಅಭಿನಯಿಸುತ್ತಿದೆ.

ನಮ್ ಏರಿಯಾಲ್ ಒಂದಿನ, ತುಘಲಕ್, ಹುಲಿರಾಯ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿದವರು ಅರವಿಂದ್ ಕೌಶಿಕ್, ‘ಶಾರ್ದೂಲ’ ಚಿತ್ರದಲ್ಲೂ ಸಾಕ್ಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ.. ‘ಭೋಜರಾಜ್ MBBS’ ಕ್ಲೈಮ್ಯಾಕ್ಸ್; ಹಾಸ್ಯರತ್ನ ಕಂಪೌಂಡರ್ ಬಗ್ಗೆ ಕುತೂಹಲ ಏಕೆ ಗೊತ್ತಾ? 

 

Related posts