ದೆಹಲಿ: ದೇಶದಲ್ಲಿ BSNL ಸೋಲುತ್ತಿದೆ ನೆಲಕಚ್ಚುತ್ತಿದೆ. ಇನ್ನೇನು ಮುಚ್ಚಿಯೇ ಬಿಡುತ್ತೆ ಎಂದೆಲ್ಲಾ ಸುದ್ದಿಗಳು ಹರಿದಾಡುತ್ತಿವೆ. ಆದ್ರೆ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳೇ ಬೇರೆ. ಜಿಯೋ ಕಂಪೆನಿ ಸಾರಿರುವ ದರ ಸಮರದಿಂದಾಗಿ ಹಲವಾರು ಕಂಪೆನಿಗಳಿಗೆ ಸವಾಲಿನ ಪರಿಸ್ಥಿತಿ ಎದುರಾದರೂ BSNL ಚಕ್ರಾಧಿಪತ್ಯಕ್ಕೆ ಅಡ್ಡಿಯಾಗಿಲ್ಲ.
ದರ ಸಮರದ ಕಾರಣಕ್ಕಾಗಿ ದೇಶದ ಟೆಲಿಫೋನ್ ಕ್ಷೇತ್ರದಲ್ಲಿ ಪೋರ್ಟಬಿಲಿಟಿ ಪ್ರಕ್ರಿಯೆ ಹೆಚ್ಚಾಗುತ್ತಲೇ ಇದ್ದು ಬಹಳಷ್ಟು ಮಂದಿ ಜಿಯೋ ನೆಟ್ವರ್ಕ್ ಆಯ್ಕೆ ಮಾಡಿದರೆ ಇನ್ನಷ್ಟು ಗ್ರಾಹಕರು BSNL ಸಂಸ್ಥೆಯನ್ನು ನೆಚ್ಚಿಕೊಂಡಿದ್ದಾರೆ.
ಟ್ರಾಯ್ ನೀಡಿರುವ ಮಾಹಿತಿಯಂತೆ ಸೆಪ್ಟೆಂಬರ್ ತಿಂಗಳಲ್ಲಿ ರಿಲಯನ್ಸ್ ಜಿಯೋಗೆ 69.83 ಲಕ್ಷ ಹೊಸ ಬಳಕೆದಾರರು ಸೇರ್ಪಡೆ ಆಗಿದ್ದಾರೆ. 7.37 ಲಕ್ಷ ಬಳಕೆದಾರರು ಬಿಎಸ್ಸೆನ್ನೆಲ್’ಗೆ ಜಿಗಿದಿದ್ದಾರೆ. ವೊಡಾಫೋನ್- ಐಡಿಯಾ ಮತ್ತು ಭಾರ್ತಿ ಏರ್ಟೆಲ್ ಕಂಪನಿಗಳು ಸುಮಾರು ೪೯ ಲಕ್ಷ ಬಳಕೆದಾರರನ್ನು ಕಳೆದುಕೊಂಡಿದೆ.
ವೈರ್ಲೆಸ್ ಚಂದಾದಾರರ ಸಂಖ್ಯೆಯಲ್ಲೂ ಇದೇ ರೀತಿ ಬೆಳವಣಿಗೆಯಾಗಿದೆ.