ಕಡಲತಡಿಯಲ್ಲಿ ಕೊರೋನಾ ಅವಾಂತರ; ಮಂಗಳೂರಿನಲ್ಲೇ 16 ಹೊಸ ಕೇಸ್

ಮಂಗಳೂರು: ಅಗೋಚರ ಚೀನೀ ವೈರಸ್ ದೇಶಾದ್ಯಂತ ತಲ್ಲಣದ ತರಂಗ ಎಬ್ಬಿಸಿದ್ದು, ಇತ್ತ ರಾಜ್ಯದ ಬಂದರು ನಗರಿ ಮಂಗಳೂರಿಗೆ ಆತಂಕದ ಸುನಾಮಿಯಂತೆ ಅಪ್ಪಳಿಸಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 16 ಮಂದಿಯಲ್ಲಿ ಕೋವಿಡ್-19 ವೈರಾಣು ಸೋಂಕು ಕಾಣಿಸಿಕೊಂಡಿದ್ದು ಇದರಿಂದಾಗಿ ಕಡಲ ತಡಿಯ ಜನರು ಬೆಚ್ಚಿ ಬಿದ್ದಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಗೆ ದುಬೈ ಏರ್ ಲಿಫ್ಟ್ ಸುನಾಮಿ ಅಪ್ಪಳಿಸಿದೆ ಎಂದೇ ಹೇಳಲಾಗುತ್ತಿದೆ. ಕೆಲ ವಾರಗಳ ಹಿಂದೆ ಕೇರಳಕ್ಕೆ ಹೊಂದಿಕೊಂಡಿರುವ ಕಾಸರಗೋಡು ಜಿಲ್ಲೆಯಲ್ಲಿ ಸರಣಿ ಪ್ರಕರಣಗಳು ಪತ್ತೆಯಾದಾಗಲೇ ಮಂಗಳೂರು ಸುತ್ತಮುತ್ತಲ ಜನ ಹೆದರಿದ್ದರು. ಇದೀಗ ದುಬೈನಿಂದ ವಾಪಾಸ್ ಆದ 15 ಜನರಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಈ ಮೂಲಕ ಒಂದೇ ದಿನದಲ್ಲಿ ದಕ್ಷಿಣ ಕನ್ನಡದಲ್ಲಿರುವ 16 ಮಂದಿ ದೇಶದ ಕೊರೋನಾ ಸೋಂಕಿತರ ಪಟ್ಟಿ ಸೇರಿದ್ದಾರೆ.

  • ಇಂದು 12 ಪುರುಷರು ಮತ್ತು 4 ಮಹಿಳೆಯರಿಗೆ ಸೋಂಕು
  • ಇವರಲ್ಲಿ 15 ಮಂದಿ ಮೇ.12ರಂದು ದುಬೈನಿಂದ ಏರ್ ಲಿಫ್ಟ್ ಆಗಿದ್ದ ಮಂಗಳೂರಿಗರು
  • ಏರ್ ಲಿಫ್ಟ್ ಅಗಿದ್ದ 179 ಪ್ರಯಾಣಿಕರ ಪೈಕಿ 123 ಜನ ಮಂಗಳೂರಿಗರು.
  • ಈ ಪೈಕಿ 15 ಜನರಿಗೆ ಕೊರೋನಾ ಪಾಸಿಟಿವ್ ಪತ್ತೆ 

ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದ ಪಾಸಿಟಿವ್ ಕೇಸ್ ಗಳ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಈ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ 29. ಈ ಮಧ್ಯೆ ಫಸ್ಟ್ ನ್ಯೂರೋ ಸಂಪರ್ಕದಿಂದ ಸೋಂಕು ತಗುಲಿ ಸಕ್ರಿಯ ಪ್ರಕರಣ 13. ಅಷ್ಟೇ ಅಲ್ಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರೆಗೆ ಸೋಂಕಿಗೆ ಐವರು ಬಲಿಯಾಯಾಗಿದ್ದಾರೆ.

ಇದೇ ವೇಳೆ ಉಡುಪಿಯಲ್ಲೂ ಐವರಲ್ಲಿ ಸೋಂಕು ದೃಢಪಟ್ಟಿದ್ದು, ಕರಾವಳಿಯಲ್ಲಿ ಒಂದೇ ದಿನದಲ್ಲಿ 21 ಹೊಸ ಪ್ರಕರಣಗಳು ಪತ್ತೆಯಾಗಿವೆ..

ಇದನ್ನೂ ಓದಿ.. ಡಾನ್ ಮುತ್ತಪ್ಪ ರೈ ತಲೆ ತಗ್ಗಿಸಿದ್ದು ಈ ಖಡಕ್ ಅಧಿಕಾರಿಯ ಮಾತಿಗೆ ಮಾತ್ರ 

 

Uncategorized

Related posts