ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಮ್ಯ ರೆಡ್ಡಿ; ಕೈ ವನಿತೆಯರ ಪಾಳಯದಲ್ಲಿ ರಣೋತ್ಸಾಹ.‌.

ಬೆಂಗಳೂರು: ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಮಾಜಿ ಶಾಸಕಿ ಸೌಮ್ಯ ರೆಡ್ಡಿ ನೇಮಕವಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಈ ಕುರಿತಂತೆ ಘೋಷಣೆ ಮಾಡುತ್ತಿದ್ದಂತೆಯೇ ಕಾಂಗ್ರೆಸ್ ವನಿತೆಯರ ಬಳಗದಲ್ಲಿ ರಣೋತ್ಸಾಹ ಕಂಡುಬಂದಿದೆ.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನಕ್ಕೆ ನಾಯಕಿಯರಿಂದ ಭಾರೀ ಲಾಭಿ ನಡೆದಿತ್ತಿತ್ತು. ಸ್ಥಾನದಲ್ಲಿ ಮುಂದುವರಿಯಲು ಪುಷ್ಪ ಅಮರನಾಥ್ ಅವರು ಪ್ರಯತ್ನ ನಡೆಸಿದ್ದರೆ, ಮತ್ತೊಂದೆಡೆ ಕವಿತಾ ರೆಡ್ಡಿ ಕೂಡಾ ದೆಹಲಿಯಲ್ಲಿ ಕಸರತ್ತು ನಡೆಸಿದ್ದರು. ಆದರೆ ಹೈಕಮಾಂಡ್ ಸೌಮ್ಯ ರೆಡ್ಡಿ ಅವರನ್ನು ನೇಮಕ ಮಾಡಿ ಅಚ್ಚರಿಯ ನಿರ್ಧಾರ ಪ್ರಕಟಿಸಿದೆ.

ಬೆಂಗಳೂರಿನ ಆರ್‌ವಿ‌ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಸೌಮ್ಯ ರೆಡ್ಡಿ, ENVIRONMENT TECHNOLOGY ಯಲ್ಲಿ NEW YORK INSTITUTE OF TECHNOLOGYಯಿಂದ ಸ್ನಾತಕೋತ್ತರ ಪದವಿ ವ್ಯಾಸಾಂಗ ಮಾಡಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಸೋಲಿಲ್ಲದ ಸರದಾರ ಎಂದೇ ಗುರುತಾಗಿರುವ ಸಚಿವ ರಾಮಲಿಂಗ ರೆಡ್ಡಿ ಅವರ ಪುತ್ತಿಯಾಗಿರುವ ಸೌಮ್ಯ ರೆಡ್ಡಿ, ತಾವು ಕೂಡಾ ತಂದೆಯ ಹಾದಿಯಲ್ಲೇ ಜನಸೇವೆಯಲ್ಲಿ ತೊಡಗಿದ್ದಾರೆ. ಕಳೆದ ವಿಧಾನಸಭಾ ಅವಧಿಯಲ್ಲಿ ಜಯನಗರ ಕ್ಷೇತ್ರದ ಶಾಸಕರಾಗಿದ್ದ ಸೌಮ್ಯ ರೆಡ್ಡಿ ಜನಾನುರಾಗಿ ಶಾಸಕಿ ಎಂದೇ ಜನಪ್ರಿಯರಾಗಿದ್ದರು.

2013ರಲ್ಲಿ ಅನಿಮಲ್ಸ್ ವೆಲ್ ಫೇರ್ ಬೋರ್ಡ್ ಆಫ್ ಇಂಡಿಯಾ ನಿರ್ದೇಶಕಿಯಾಗಿದ್ದ ಅವರು, 2016ರಲ್ಲಿ ರಾಜಕೀಯ ಪ್ರವೇಶ ಮಾಡಿ ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿಯಾದರು.

2017ರಲ್ಲಿ ಯುವ ಕಾಂಗ್ರೆಸ್ ಬೆಂಗಳೂರು ನಗರ ಉಪಾಧ್ಯಕ್ಷರಾಗಿ ಪಕ್ಷ ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸೌಮ್ಯ ರಡ್ಡಿ, 2018ರಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾದರು.

2019ರಲ್ಲಿ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಪ್ರಸಕ್ತ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಸೌಮ್ಯರೆಡ್ಡಿ ಅವರಿಗೆ ಕೆಪಿಸಿಸಿ ಸಾರಥ್ಯ ವಹಿಸುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ಜವಾಬ್ದಾರಿ ವಹಿಸಿದೆ.

ಶಾಲಾ ಕಾಲೇಜು ದಿನ ದಿನಗಳಿಂದಲೂ ಅಹಿಂಸಾವಾದಿ, ಪ್ರಾಣಿಗಳ ಪ್ರೇಮಿ, ಪರಿಸರ ಪ್ರೇಮಿ ಶುದ್ಧ ಕುಡಿಯುವ ನೀರು ಒದಗಿಸುವ ಬಗ್ಗೆ ಹೆಚ್ಚು ಚಿಂತನೆ, ರೈನ್ ವಾಟರ್ ಹಾರ್ವೆಸ್ಟಿಂಗ್ ನಲ್ಲಿ ಅತಿ ಹೆಚ್ಚು ಆಸಕ್ತಿ, ಸಾಲಿಡ್ ವೆಸ್ಟ್ ಮ್ಯಾನೇಜ್ಮೆಂಟ್ ನಿರ್ವಹಿಸುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಸೌಮ್ಯ, ಮಹಿಳೆಯರು, ಮಕ್ಕಳ ಹಕ್ಕುಗಳಿಗಾಗಿ ಹೋರಾಟ ಮೂಲಕವೂ ಗಮನಸೆಳೆದಿದ್ದಾರೆ.

ಇವರು, Vegan ಪ್ರಾಣಿಗಳಿಗೆ ಸಂಬಂಧಪಟ್ಟ ರೀತಿಯ ಆಹಾರವನ್ನು ಸೇವಿಸುವುದಿಲ್ಲ, ಯಾವುದೇ ರೀತಿಯ ರೇಷ್ಮೆ ಬಟ್ಟೆಗಳನ್ನು ಧರಿಸುವುದಿಲ್ಲ, ಹಾಲಿಂದ ತಯಾರಿಸುವ ಯಾವುದೇ ಪದಾರ್ಥವನ್ನು ಸ್ವೀಕರಿಸುವುದಿಲ್ಲ. ಈ ವಿಭಿನ್ನ ವ್ಯಕ್ತಿತ್ವದಿಂದಲೂ ಅವರು ಗಮನಸೆಳೆದಿದ್ದಾರೆ.

Related posts