ಸಚಿವ ಶ್ರೀರಾಮುಲು ಬಗ್ಗೆ ಹೀಗೇಕೆ ಸಿಟ್ಟು? ಹೀಗೇಕೆ ಪ್ರತಿಕ್ರಿಯೆ?

ಬೆಂಗಳೂರು: ಕೊರೋನಾ ಸಂಕಟ ಕಾಲದಲ್ಲಿ ಆಡಳಿತ ಅತ್ಯಂತ ದುಸ್ತರ. ಅದರಲ್ಲೂ ಆರೋಗ್ಯ ಸಚಿವಾಲಯದ ಜವಾಬ್ಧಾರಿ ಬಹಳಷ್ಟು ಹೆಚ್ಸಿದೆ. ಆದರೆ ಬಹುತೇಕ ಆಸ್ಪತ್ರೆ ವೈದ್ಯರ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಂದಾಗಿ ಸಾರ್ವಜನಿಕರೂ ರೋಸಿಹೋಗಿದ್ದರೆ.

ಈ ನಡುವೆ, ಬೆಂಗಳೂರಿನ ವಿಕ್ಟೋರಿಯ ಹಾಗೂ ವಾಣಿವಿಲಾಸ ಆಸ್ಪತ್ರೆಗಳ ವೈದ್ಯರು 100ನೇ ಕೋವಿಡ್ ಸೋಂಕಿತ ಗರ್ಭಿಣಿ‌ಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ.

ವೈದ್ಯರ ಈ ಸಾಧನೆ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು, ಈ ಆಸ್ಪತ್ರೆಯ ವೈದ್ಯರು ವಿಶೇಷ ಮೈಲಿಗಲ್ಲು ಸಾಧಿಸಿದ್ದಾರೆ ಎಂದು ಬಣ್ಣಿಸಿದ್ದಾರೆ. ಈ ಎರಡೂ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿಯ ಈ ಸಾಧನೆ‌ ನಿಜಕ್ಕೂ‌ ಶ್ಲಾಘನೀಯ ಎಂದವರು ಬಣ್ಣಿಸಿದ್ದಾರೆ.

ಸಚಿವರ ಈ ಟ್ವೀಟ್ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಬಗೆಬಗೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ತಮ್ಮದೇ ಶೈಲಿಯಲ್ಲಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದಕ್ಕೆ ಟ್ವಿಟ್ಟರ್’ನಲ್ಲಿ ಕೆಲವರ ಪ್ರತಿಕ್ರಿಯೆ ಸಚಿವರನ್ನು ಮುಜುಗರಕ್ಕೀಡು ಮಾಡುವಂತಿದೆ. ಒಬ್ಬರಂತೂ ‘ಈಗ ತಾನೇ ಟಿವಿ ನಲ್ಲಿ ನೋಡುತಾ ಇದ್ದೆ, ಒಬ್ರು ಗರ್ಭಿಣಿ  ಚಿಕಿತ್ಸೆ ಸಿಗದೆ ಒದ್ದಾಡ್ತಾ ಇದ್ದಾರೆ. ಸ್ವಲ್ಪ ರಾಜ್ಯದ ಜನರ ಕಷ್ಟಗಳ ಕಡೆ ಗಮನ ಹರಿಸಿ’ ಎಂದು ಪ್ರತಿಕ್ರಿಯಿಸಿ ಸಚಿವರನ್ನು ತಬ್ಬಿಬ್ಬುಗೊಳಿಸಿದ್ದಾರೆ.

ಮತ್ತೊಬ್ಬರು ‘ಇಂತಹ ಅನುಭವಿ ವೈದ್ಯರ ತಂಡವನ್ನು ರಚಿಸಿ ರಾಜ್ಯದ ಇನ್ನಿತರ ಜಿಲ್ಲೆಗಳಿಗೆ ವಾರಕ್ಕೊಂದು ಸಲ ವೀಕ್ಷಣೆಗಾಗಿ ಕಳುಹಿಸಿ ರಾಜ್ಯದ ಎಲ್ಲಾ ಜಿಲ್ಲೆಯ ಕೋರೋನಾ ರೋಗಿಗಳ ಸುಧಾರಣೆಗಾಗಿ ಪ್ರಯತ್ನಪಡಿ, ಧನ್ಯವಾದಗಳು’ ಎಂದು ಪ್ರತಿಕ್ರಿಯಿಸಿದ ವೈಖರಿ, ಪ್ರಸ್ತುತ ರಾಜ್ಯದ ಆರೋಗ್ಯ ಕ್ಷೇತ್ರದ ಅವ್ಯವಸ್ಥೆಯನ್ನು ಉಲ್ಲೇಖಿಸಿ ವ್ಯಂಗ್ಯ ಮಾಡಿದಂತಿದೆ.

https://twitter.com/raghuveer5307/status/1284116206501285888

ಇದನ್ನೂ ಓದಿ.. ಶ್ರೀರಾಮುಲು ಧರಿಸಿರುವ ಮಾಸ್ಕ್ ಯಾವುದು ಗೊತ್ತಾ? ಸ್ನೇಹಿತ ಕೊಟ್ಟ ಗಿಫ್ಟ್..

 

Related posts