ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಾಜ್ಯದ19 ಪೊಲೀಸರಿಗೆ ಕೇಂದ್ರ ಸರ್ಕಾರ ರಾಷ್ಟ್ರಪತಿಗಳ ಪದಕ ಘೋಷಿಸಿದೆ. ಗಣನೀಯ ಸೇವೆಯನ್ನು ಪರಿಗಣಿಸಿ ಪ್ರತೀ ವರ್ಷ ಸ್ವಾತಂತ್ರ್ಯ ದಿನದಂದು ರಾಷ್ಟ್ರಪತಿ ಪದಕಗಳನ್ನು ಕೇಂದ್ರ ಗೃಹ ಇಲಾಖೆ ಪ್ರಕಟಿಸುತ್ತದೆ. ಅದರಂತೆ ಈ ಬಾರಿ ಕರ್ನಾಟಕದ 19 ಪೊಲೀಸ್ ಅಧಿಕಾರಿಗಳಿಗೆ ಈ ಪದಕ ಪ್ರಕಟವಾಗಿದೆ. ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕ. ಎಂ.ಚಂದ್ರಶೇಖರ್, ಆಂತರಿಕಾ ಭದ್ರತಾ ವಿಭಾಗದ ಎಡಿಜಿಪಿ. ಶ್ಲಾಘನೀಯ ಸೇವಾ ಪದಕ ಪುರಸ್ಕೃತರು: ಶ್ರೀನಾಥ್ ಎಂ ಜೋಷಿ, ಎಸ್‌ಪಿ ಲೋಕಾಯುಕ್ತ ಸಿ.ಕೆ ಬಾಬಾ, ಎಸ್‌ಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಮಗೊಂಡ ಬಿ ಬಸರಗಿ, ಎಎಸ್‌ಪಿ, ಬಳ್ಳಾರಿ ಜಿಲ್ಲೆ ಎಂ.ಡಿ. ಶರತ್, ಎಸ್‌ಪಿ, ಸಿಐಡಿ, ಬೆಂಗಳೂರು ವಿ.ಸಿ. ಗೋಪಾಲರೆಡ್ಡಿ, ಡಿಸಿಪಿ, ಸಿಆರ್, ಪಶ್ಚಿಮ, ಬೆಂಗಳೂರು ನಗರ ಗಿರಿ ಕೆ.ಸಿ, ಡಿವೈಎಸ್‌ಪಿ, ಚನ್ನಪಟ್ಟಣ ಉಪ-ವಿಭಾಗ, ರಾಮನಗರ ಜಿಲ್ಲೆ ಮುರಳೀಧರ್ ಪಿ, ಡಿವೈಎಸ್‌ಪಿ, ಚಿಂತಾಮಣಿ ಉಪ-ವಿಭಾಗ, ಚಿಕ್ಕಬಳ್ಳಾಪುರ ಜಿಲ್ಲೆ…