ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೌಮ್ಯ ರೆಡ್ಡಿ; ಕೈ ವನಿತೆಯರ ಪಾಳಯದಲ್ಲಿ ರಣೋತ್ಸಾಹ.‌.

ಬೆಂಗಳೂರು: ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಮಾಜಿ ಶಾಸಕಿ ಸೌಮ್ಯ ರೆಡ್ಡಿ ನೇಮಕವಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಈ ಕುರಿತಂತೆ ಘೋಷಣೆ ಮಾಡುತ್ತಿದ್ದಂತೆಯೇ ಕಾಂಗ್ರೆಸ್ ವನಿತೆಯರ ಬಳಗದಲ್ಲಿ ರಣೋತ್ಸಾಹ ಕಂಡುಬಂದಿದೆ. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನಕ್ಕೆ ನಾಯಕಿಯರಿಂದ ಭಾರೀ ಲಾಭಿ ನಡೆದಿತ್ತಿತ್ತು. ಸ್ಥಾನದಲ್ಲಿ ಮುಂದುವರಿಯಲು ಪುಷ್ಪ ಅಮರನಾಥ್ ಅವರು ಪ್ರಯತ್ನ ನಡೆಸಿದ್ದರೆ, ಮತ್ತೊಂದೆಡೆ ಕವಿತಾ ರೆಡ್ಡಿ ಕೂಡಾ ದೆಹಲಿಯಲ್ಲಿ ಕಸರತ್ತು ನಡೆಸಿದ್ದರು. ಆದರೆ ಹೈಕಮಾಂಡ್ ಸೌಮ್ಯ ರೆಡ್ಡಿ ಅವರನ್ನು ನೇಮಕ ಮಾಡಿ ಅಚ್ಚರಿಯ ನಿರ್ಧಾರ ಪ್ರಕಟಿಸಿದೆ. ಬೆಂಗಳೂರಿನ ಆರ್‌ವಿ‌ ಕಾಲೇಜಿನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಸೌಮ್ಯ ರೆಡ್ಡಿ, ENVIRONMENT TECHNOLOGY ಯಲ್ಲಿ NEW YORK INSTITUTE OF TECHNOLOGYಯಿಂದ ಸ್ನಾತಕೋತ್ತರ ಪದವಿ ವ್ಯಾಸಾಂಗ ಮಾಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸೋಲಿಲ್ಲದ ಸರದಾರ ಎಂದೇ ಗುರುತಾಗಿರುವ ಸಚಿವ ರಾಮಲಿಂಗ ರೆಡ್ಡಿ ಅವರ ಪುತ್ತಿಯಾಗಿರುವ ಸೌಮ್ಯ ರೆಡ್ಡಿ, ತಾವು…