ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ:ನಗರದ ಅರಳು ಮಲ್ಲಿಗೆ ಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಆವರಣದಲ್ಲಿ ಜನಪರ ಸಂಘಟನೆಗಳ ವತಿಯಿಂದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ ನಡೆಯಿತು. ಈ ವೇಳೆ ಕನ್ನಡ ಪಕ್ಷದ ಮುಖಂಡ ಸಂಜೀವ ನಾಯಕ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವ ಸಮ್ಮತವಾದ ಪ್ರಪಂಚದಲ್ಲೇ ಅತ್ಯುತ್ತಮವಾದ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಜೀವಪರ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ, ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಸಿಐಟಿಯು ಮುಖಂಡ ಪಿಎ ವೆಂಕಟೇಶ್ ಮಾತನಾಡಿ ಮುಸ್ಲಿಮರಿಗೆ ಕುರಾನ್, ಕ್ರಿಶ್ಚಿಯನ್ನರಿಗೆ ಬೈಲ್, ಹಿಂದುಗಳಿಗೆ ರಾಮಾಯಣ ಮಹಾಭಾರತ ಶ್ರೇಷ್ಠಗ್ರಂಥವಾದರೆ ಇಡೀ ಭಾರತೀಯರಿಗೆ ನಮ್ಮ ಹೆಮ್ಮೆಯ ಸಂವಿಧಾನ ಶ್ರೇಷ್ಠವಾದ ಗ್ರಂಥ, ಸಂವಿಧಾನವೂ ಯಾವುದೇ ವ್ಯಕ್ತಿಯನ್ನು ಧರ್ಮ, ಜಾತಿ, ಭಾಷೆ, ಆಧಾರದ ಮೇಲೆ ತಾರತಮ್ಯ ತೋರುವುದಿಲ್ಲ, ಲಿಂಗ ಅಸಮಾನತೆಯನ್ನು ಸಹಿಸುವುದಿಲ್ಲ. ಇಂತಹ ಜೀವಪರ ಮೌಲ್ಯಗಳನ್ನು ಭಾರತೀಯರಾದ ನಾವೆಲ್ಲರೂ ಪಾಲಿಸುವುದರಿಂದ ದೇಶದ…