ಹಾಸನ: ಹಾಸನದ ಅಧಿದೇವತೆ ಹಾಸನನಾಂಬ ದೇವಿ ಜಾತ್ರೆಗೆ ತೆರೆಬಿದ್ದಿದೆ. ಈ ಮೂಲಕ ವರ್ಷಕ್ಕೊಮ್ಮೆ ನಡೆಯುವ ದೇವಿದರ್ಶನವೂ ಅಂತ್ಯವಾಗಿದೆ. ಹಾಸನಾಂಬ ದೇವಸ್ಥಾನದ ಗರ್ಭಗುಡಿ ಬಾಗಿಲನ್ನು ಭಾನುವಾರ ಮುಚ್ಚಲಾಗುತ್ತದೆ. ಹಾಸನಾನೆಂಬ ದೇವಾಲಯದ ಗರ್ಭಗುಡಿಯನ್ನು ವರ್ಷಕ್ಕೊಮ್ಮೆ ತೆರೆಯಲಾಗುತ್ತದೆ. ಹಾಗಾಗಿ ವಾರ್ಷಿಕ ಜಾತ್ರೆವೈಭವ ಸಾಕ್ಷೀಕರಿಸಲು ಲಕ್ಷಾಂತರ ಜನರು ಹಾಸನಕ್ಕೆ ಆಗಮಿಸಿದ್ದರು. ಮಹೋತ್ಸವದ ಅಂತಿಮ ದಿನವಾದ ಇಂದು ಹಸನಾನೆಂಬ ದೇವಾಲಯದ ಆವರಣ ಭಕ್ತಸಾಗರದಿಂದ ತುಂಬಿತ್ತು. ಅಕ್ಟೋಬರ್ 24 ರಂದು ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು. ಅಕ್ಟೋಬರ್ 25 ರಿಂದ ನವೆಂಬರ್ 03 ನಸುಕಿನ ಜಾವ 6 ಗಂಟೆಯವರೆಗೆ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಕಳೆದ ೯ ದಿನಗಳಲ್ಲಿ ಸುಮಾರು 20 ಲಕ್ಷ ಭಕ್ತರು ದೇವಿ ದರ್ಶನ ಪಡೆದು ಪುನೀತರಾಗಿದ್ದಾರೆ. ಇದೇ ವೇಳೆ ಈ ಬಾರಿ ಹಾಸನಾಂಬ ದೇಗುಲಕ್ಕೆ 9 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಹರಿದು ಬಂದಿದೆ ಎಂದು ಮೂಲಗಳು ತಿಳಿಸಿವೆ.