ಆತಂಕದ ಅಲೆ ಎಬ್ಬಿಸುತ್ತಲೇ ಇದೆ ಕೊರೋನಾ

ದೆಹಲಿ: ಕೊರೋನಾ ಮರಣ ಮೃದಂಗ ಭಾರಿಸುತ್ತಲೇ ಇದೆ. ಅಗೋಚರ ವೈರಸ್ ಆತಂಕದ ಅಲೆಯನ್ನು ಎಬ್ಬಿಸುತ್ತಲೇ ಇದೆ. ಭಾರತದಲ್ಲೂ ಅದರ ಕಂಪನ ಜನರಲ್ಲಿ ಆತಂಕ ಹೆಚ್ಚುತ್ತಲೇ ಇದ್ದು, ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಎರಡನೇ ಅವಧಿಗೆ ವಿಸ್ತಾರಗೊಂಡಿರುವ ಲಾಕ್’ಡೌನ್ ಕೊನೆಯ ಹಂತದಲ್ಲಿದ್ದರೂ ಕೊರೋನಾ ಕಥಾನಕದ ಕ್ಲೈಮ್ಯಾಕ್ಸ್ ಸುಳಿವು ಗೊತ್ತಾಗುತ್ತಲೇ ಇಲ್ಲ. ದೇಶದಲ್ಲಿ ಕೊರೋನಾ ಸಾವಿನ ಸಂಖ್ಯೆ 1147ಕ್ಕೆ ಏರಿಕೆಯಾಗಿದೆ.

ಶುಕ್ರವಾರ ಬಿಡುಗಡೆಯಾದ ವರದಿಯಂತೆ ಆ ವರೆಗಿನ 24 ತಾಸುಗಳಲ್ಲಿ ದೇಶದಲ್ಲಿ 73 ಮಂದಿ ಬಲಿಯಾಗಿದ್ದಾರೆ. ಭಾರತದಲ್ಲಿ ಲಾಕ್’ಡೌನ್ ಜಾರಿಯಲ್ಲಿದ್ದರೂ ಸೋಂಕಿತರ ಲೆಕ್ಕದಲ್ಲಿ ಕಡಿಮೆಯಾಗುತ್ತಿಲ್ಲ. ವೈರಾಣು ಹಾವಳಿಗೂ ಅಂಕುಶ ಬೀಳುತ್ತಿಲ್ಲ. ಕಳೆದೆರಡು ದಿನಗಳಲ್ಲಿ ದೇಶದಲ್ಲಿ 2 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಆರೋಗ್ಯ ಇಲಾಖೆ ಹೇಳುವಂತೆ ದೇಶಾದ್ಯಂತ ಸೋಂಕಿತರ ಸಂಖ್ಯೆ 35,043ಕ್ಕೆ ಏರಿಕೆಯಾಗಿದೆ.

  • ಮಹಾರಾಷ್ಟ್ರದಲ್ಲಿ 10,478 ಮಂದಿಯಲ್ಲಿ ಸೋಂಕು
  • ಗುಜರಾತ್ನಲ್ಲಿ 4,082 ಮಂದಿಯಲ್ಲಿ ಸೋಂಕು
  • ದೆಹಲಿಯಲ್ಲಿ 3,515 ಮಂದಿಯಲ್ಲಿ ಸೋಂಕು
  • ಮಧ್ಯಪ್ರದೇಶದಲ್ಲಿ 2,660 ಮಂದಿಯಲ್ಲಿ ಸೋಂಕು
  • ರಾಜಸ್ತಾನದಲ್ಲಿ 2,438 ಮಂದಿಯಲ್ಲಿ ಸೋಂಕು
  • ಉತ್ತರಪ್ರದೇಶದಲ್ಲಿ 2,203 ಮಂದಿಯಲ್ಲಿ ಸೋಂಕು
  • ತಮಿಳುನ ಡಿನಲ್ಲಿ 2,162 ಮಂದಿಯಲ್ಲಿ ಸೋಂಕು
  • ಆಂಧ್ರಪ್ರದೇಶದಲ್ಲಿ 403 ಮಂದಿಯಲ್ಲಿ ಸೋಂಕು

Related posts