ಬೆಂಗಳೂರು: ಉದ್ಯಾನ ನಗರಿಯ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ನಡೆಯುತ್ತಿರುವ ಐದು ದಿನಗಳ ಏರೋ ಇಂಡಿಯಾ 2025 ಪ್ರದರ್ಶನದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ತನ್ನ ಲಘು ಉಪಯುಕ್ತ ಹೆಲಿಕಾಪ್ಟರ್, ಫೈಟರ್ ಜೆಟ್ ಮತ್ತು ತರಬೇತಿ ವಿಮಾನಗಳನ್ನು ಪ್ರದರ್ಶಿಸುತ್ತಿದೆ. “HAL ‘ಇನ್ನೋವೇಟ್. ಕೊಲಾಬರೇಟ್. ಲೀಡ್’ ಎಂಬ ಥೀಮ್ ಅನ್ನು ಕೇಂದ್ರೀಕರಿಸಿ ಏರೋ ಇಂಡಿಯಾ 2025 ರಲ್ಲಿ ತನ್ನ ಸ್ಥಳೀಯ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಲಿದೆ” ಎಂದು HAL ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ ಕೆ ಸುನಿಲ್ ಹೇಳಿದ್ದಾರೆ. HAL ನ ಒಳಾಂಗಣ ಪೆವಿಲಿಯನ್ (HAL-E) ನಲ್ಲಿ LUH, ಹಿಂದೂಸ್ತಾನ್ ಟರ್ಬೊ ಟ್ರೈನರ್ (HTT)-40 ಸಿಮ್ಯುಲೇಟರ್, LCA Mk1A ಫೈಟರ್, LCA Mk1 ಟ್ರೈನರ್, ಹಿಂದೂಸ್ತಾನ್ ಜೆಟ್ ಟ್ರೈನರ್ (HJT)-36, HTT-40, LCH ಮತ್ತು ALH Mk IV ನ ಸ್ಕೇಲ್ಡ್ ಮಾದರಿಗಳು ಪ್ರಮುಖ ಆಕರ್ಷಣೆಯಾಗಿರುತ್ತವೆ ಎಂದು ಕಂಪನಿಯ…