ಮಂಗಳೂರಿನ 10 ತಿಂಗಳ ಮಗುವಿಗೆ ಕೊರೋನಾ ಸೋಂಕು; ಇಡೀ ಗ್ರಾಮಕ್ಕೆ ದಿಗ್ಬಂಧನ

ಮಂಗಳೂರು: ರಾಜ್ಯ ಕರಾವಳಿಯಲ್ಲಿ ಕೊರೋನಾ ಸೋಂಕು ಪ್ರಕರಣಗಳು ಮತ್ತೆಮತ್ತೆ ಬೆಳಕಿಗೆ ಬರುತ್ತಿದ್ದು ಜನರಲ್ಲಿನ ಆತಂಕ ಹೆಚ್ಚಾಗಿದೆ. ಕೆಲ ದಿನಗಳ ಹಿಂದಷ್ಟೇ ಮಂಗಳೂರಿನ ಆಸ್ಪತ್ರೆಯಲ್ಲಿ ಭಟ್ಕಳ ಮೂಲದ ವ್ಯಕ್ತಿಯೊಬ್ಬರಲ್ಲಿ ಕೊರೋನಾ ವೈರಸ್ ದೃಢಪಟ್ಟಿತ್ತು. ಇದೀಗ ೧೦ ತಿಂಗಳ ಮಗು ಕೂಡಾ ಕೊರೋನಾ ಸೋಂಕಿನಿಂದ ಬಳಲುತ್ತಿರುವುದು ಗೊತ್ತಾಗಿದೆ.

ಸಜಿಪನಡು ಗ್ರಾಮದ 10 ತಿಂಗಳ ಮಗುವಿಗೆ ಕೊರೊನ ಪಾಸಿಟಿವ್ ದೃಢಪಟ್ಟಿದ್ದು ಈ ಕಾರಣಕ್ಕಾಗಿ ಆ ಗ್ರಾಮವೀಗ ದಿಗ್ಬಂಧನಕ್ಕೊಳಗಾಗಿದೆ. ಗ್ರಾಮದಿಂದ ಯಾರು ಹೊರಹೋಗುವಂತಿಲ್ಲ ಗ್ರಾಮಕ್ಕೆ ಯಾರು ಒಳ ಬರುವಂತಿಲ್ಲ.

ಇದನ್ನೂ ಓದಿ.. ಕೊರೋನಾ ಹಿನ್ನೆಲೆ; ಬಂಟ್ವಾಳ ಬಿಜೆಯಿಯಿಂದ ಜಾಗೃತಿ ಸಂದೇಶ 

ಈ ಹಿನ್ನೆಲೆಯಲ್ಲಿ ಬಂಟ್ವಾಳ ಬಿಜೆಪಿ ಕಾರ್ಯಕರ್ತರು ಎಚ್ಚರಿಕೆಯ ಸಂದೇಶದ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ. ಕೊರೋನಾ ಹಾವಳಿ ಸಂದರ್ಭದಲ್ಲಿ ತುರ್ತು ಸೇವೆಗಾಗಿ ರಚನೆಗೊಂಡಿರುವ ಆರೋಗ್ಯ ಕಾರ್ಯಕರ್ತರು ತಮ್ಮ ಸಂದೇಶಗಳನ್ನು ಜನರಿಗೆ ಸಾರಿ ಹೇಳುವ ಕಾರ್ಯದಲ್ಲಿ ತೊಡಗಿದ್ದಾರೆ.

ಬಿಜೆಪಿ ಶಾಸಕ ಅಂಗಾರ ದಿಢೀರ್ ಅಸ್ವಸ್ಥ; ಕಾರ್ಯಕರ್ತರಲ್ಲಿ ಆತಂಕ

 

Related posts