ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಅಭಿಮಾನಿಗಳನ್ನು ಸಂಪಾದಿಸಿರುವ ರಜತ್ ಹಾಗೂ ವಿನಯ್ ಗೌಡ ‘ಒಂದು ಮಚ್ಚಿನ ಕಥೆ’ಯಿಂದಾಗಿ ವಿಲನ್ ಎನಿಸಿಕೊಂಡರು. ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಹಕ್ಕಿಗಳಾದ ಈ ಇಬ್ಬರು ಸೆಲೆಬ್ರೆಟಿಗಳು ಇದೀಗ ಜಾಮೀನಿನ ಮೂಲಕ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿರುವ ವಿನಯ್ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಅವರು ಕ್ಷಮೆಕೋರಿದ್ದಾರೆ. View this post on Instagram A post shared by Vinay Gowda (@vinaygowdaactor) ‘ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದಿರುವ ವಿನಯ್, ಮಚ್ಚು ಇಡ್ಕೊಂಡು ವಿಡಿಯೋ ಮಾಡಬಾರದಿತ್ತು. ಇದರಿಂದ ತೊಂದರೆ ಆಗಿದೆ. ನನ್ನಿಂದ ತಪ್ಪಾಗಿದೆ’ ಎಂದಿದ್ದಾರೆ. ಇದು ಇಷ್ಟು ದೊಡ್ಡ ಸಮಸ್ಯೆ ತಂದುಕೊಡುತ್ತದೆ ಅಂಥ ಅನ್ನೊಂಡಿರಲಿಲ್ಲ. ನನ್ನ ಎಚ್ಚರಿಕೆಯಲ್ಲಿ ನಾನು ಇರಬೇಕಾಗಿತ್ತು. ನಾನು ಈ ರೀತಿ ಮೆಸೇಜ್ ನನ್ನ ಫಾಲೋವರ್ಸ್‌ಗೆ ಕೊಡಬಾರದಿತ್ತು ಕ್ಷಮಿಸಿ’ ಎಂದವರು ಹೇಳಿರುವ ವೀಡಿಯೋ…