ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ಪ್ರಯಾಣ ದರ ಏರಿಕೆಯನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತೀವ್ರವಾಗಿ ಆಕ್ಷೇಪಿಸಿದ್ದಾರೆ. ನಗರದ ಮೆಟ್ರೋದಲ್ಲಿ ದಿನವೂ ಸರಾಸರಿ 10 ಲಕ್ಷ ಜನರು – ವಿದ್ಯಾರ್ಥಿಗಳು, ಸಾಮಾನ್ಯ ಉದ್ಯೋಗಿಗಳು, ಐಟಿ-ಬಿಟಿ ವಲಯದವರು – ಪ್ರಯಾಣಿಸುತ್ತಾರೆ. ಆದರೆ ಇತ್ತೀಚಿನ ದರ ಏರಿಕೆಯಿಂದ ಸಾಮಾನ್ಯ ಬಳಕೆದಾರರಿಗೆ ಮೆಟ್ರೋ ದುಬಾರಿಯಾಗಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ದರ ಏರಿಕೆಯಿಂದ ಬೆಂಗಳೂರು ಮೆಟ್ರೋ ದೇಶದಲ್ಲೇ ಅತಿ ದುಬಾರಿ ಮೆಟ್ರೋ ಆಗಿದೆ. ಡೆಲ್ಲಿ ಮೆಟ್ರೋ ದರ ಏರಿಕೆ ಗರಿಷ್ಠ ₹4ಕ್ಕೆ ಮಿತವಾಗಿದ್ದರೆ, ಬೆಂಗಳೂರಿನಲ್ಲಿ ಪ್ರತಿ ಪ್ರಯಾಣಕ್ಕೂ ಅತಿಯಾದ ಭಾರವಾಗಿದೆ” ಎಂದು ಅವರು ಹೋಲಿಕೆ ಮಾಡಿದ್ದಾರೆ. 25 ಕಿ.ಮೀ. ಗಿಂತ ಹೆಚ್ಚು ದೂರ ಕೆಲಸಕ್ಕೆ ಪ್ರಯಾಣಿಸುವವರು ಪ್ರತಿ ಸಾರಿ ₹90 ಪಾವತಿಸಬೇಕಾಗುತ್ತದೆ. ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕ ವೆಚ್ಚ ಸೇರಿ ಇದು ಸಾರ್ವಜನಿಕ ಸಾರಿಗೆಗೆ ನಿರುತ್ಸಾಹ ಉಂಟುಮಾಡಿ…
