ಬೆಂಗಳೂರು: ಕಾವೇರಿ ನೀರು ನಿಲ್ಲಿಸುವ , ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯುವ ಬಗ್ಗೆ ರಾಜ್ಯಪಾಲರು ಸರ್ಕಾರದ ಮುಖ್ಯಸ್ಥರನ್ನು ಆಹ್ವಾನಿಸಿ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿ ನಿರಂತರ ಧರಣಿ ಕೈಬಿಡುವಂತೆ ರಾಜ್ಯಪಾಲರು ಕೋರಿದ ಹಿನ್ನೆಲೆಯಲ್ಲಿ ಇಂದಿನಿಂದ ತಾತ್ಕಾಲಿಕವಾಗಿ ಚಳುವಳಿಯನ್ನು ಕೈಬಿಡಲು ಸಮಿತಿ ತೀರ್ಮಾನಿಸಿದೆ ಎಂದು ಸಮಿತಿಯ ಸಂಚಾಲಕ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ. ಮುಂದೇನು..? ಬೆಂಗಳೂರು ನಗರ ಕಾವೇರಿ ಅಚ್ಚು ಕಟ್ಟು ಭಾಗದಲ್ಲಿ ಕರ್ನಾಟಕ ಜಲ ಸಂರಕ್ಷಣ ಸಮಿತಿ 60 ದಿನಗಳಿಂದ ಚಳುವಳಿ ನಡೆಸುತ್ತಿದ್ದರು. ಬೆಂಗಳೂರು ನಗರದ ಶಾಸಕರು ವಿಚಾರದಲ್ಲಿ ಮೌನ ವಹಿಸಿದ್ದು, ಅವರಿಗೆ ಜನರ ಸಂಕಷ್ಟ ಅರಿವಾಗಿಲ್ಲ. ಅದಕ್ಕಾಗಿ ಅವರನ್ನು ಎಚ್ಚರಿಸಲು, ಐದು ದಿನದ ಒಳಗಾಗಿ ರಾಜ್ಯಪಾಲರ ಭರವಸೆಯಂತೆ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ಚಳುವಳಿಯನ್ನ ಬೆಂಗಳೂರಿನ ನಗರಾಧ್ಯಂತ ವಿಸ್ತರಿಸಿ MLA,MP ಮನೆ ಮುಂದೆ ಬಾಯಿ ಬಡಿದುಕೊಳ್ಳುವ ಚಳುವಳಿ ನಡೆಸಲಾಗುವುದು ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.…