ಕಾವೇರಿ ಹೋರಾಟ: 14 ದಿನಗಳ ನಿರಂತರ ಧರಣಿ ತಾತ್ಕಾಲಿಕ ಕೈಬಿಟ್ಟ ಕರ್ನಾಟಕ ಜಲ ಸಂರಕ್ಷಣಾ ಸಮಿತಿ

ಬೆಂಗಳೂರು: ಕಾವೇರಿ ನೀರು ನಿಲ್ಲಿಸುವ , ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯುವ ಬಗ್ಗೆ ರಾಜ್ಯಪಾಲರು ಸರ್ಕಾರದ ಮುಖ್ಯಸ್ಥರನ್ನು ಆಹ್ವಾನಿಸಿ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿ ನಿರಂತರ ಧರಣಿ ಕೈಬಿಡುವಂತೆ ರಾಜ್ಯಪಾಲರು ಕೋರಿದ ಹಿನ್ನೆಲೆಯಲ್ಲಿ ಇಂದಿನಿಂದ ತಾತ್ಕಾಲಿಕವಾಗಿ ಚಳುವಳಿಯನ್ನು ಕೈಬಿಡಲು ಸಮಿತಿ ತೀರ್ಮಾನಿಸಿದೆ ಎಂದು ಸಮಿತಿಯ ಸಂಚಾಲಕ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಮುಂದೇನು..?

ಬೆಂಗಳೂರು ನಗರ ಕಾವೇರಿ ಅಚ್ಚು ಕಟ್ಟು ಭಾಗದಲ್ಲಿ ಕರ್ನಾಟಕ ಜಲ ಸಂರಕ್ಷಣ ಸಮಿತಿ 60 ದಿನಗಳಿಂದ ಚಳುವಳಿ ನಡೆಸುತ್ತಿದ್ದರು. ಬೆಂಗಳೂರು ನಗರದ ಶಾಸಕರು ವಿಚಾರದಲ್ಲಿ ಮೌನ ವಹಿಸಿದ್ದು, ಅವರಿಗೆ ಜನರ ಸಂಕಷ್ಟ ಅರಿವಾಗಿಲ್ಲ. ಅದಕ್ಕಾಗಿ ಅವರನ್ನು ಎಚ್ಚರಿಸಲು, ಐದು ದಿನದ ಒಳಗಾಗಿ ರಾಜ್ಯಪಾಲರ ಭರವಸೆಯಂತೆ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ಚಳುವಳಿಯನ್ನ ಬೆಂಗಳೂರಿನ ನಗರಾಧ್ಯಂತ ವಿಸ್ತರಿಸಿ MLA,MP ಮನೆ ಮುಂದೆ ಬಾಯಿ ಬಡಿದುಕೊಳ್ಳುವ ಚಳುವಳಿ ನಡೆಸಲಾಗುವುದು ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು. ಆಗಲು ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ 24 ನೇ ತಾರೀಕು ದಸರಾ ದಿನದಂದು ಕಾವೇರಿ ಅಚ್ಚು ಕಟ್ಟು ಭಾಗದ ಹೆದ್ದಾರಿ ಬಂದ್ ಚಳುವಳಿ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿ, 14ನೇ ದಿನ ಚಳುವಳಿ ಕೈ ಬಿಡಲಾಯಿತು ಎಂದು ಅವರು ತಿಳಿಸಿದರು.

ಇಂದಿನ ಚಳುವಳಿಯಲ್ಲಿ ಕನ್ನಡ ಚಳುವಳಿ ಗುರುದೇವ ನಾರಾಯಣ, ಸಮತ ಸೈನಿಕ ದಳದ ವೆಂಕಟಸ್ವಾಮಿ, ಕನ್ನಡ ರಕ್ಷಣಾ ವೇದಿಕೆ ರಾಜಪ್ಪ ಚಲನಚಿತ್ರ ನಟಿ ಭೂಮಿಕ, ಇತಿಹಾಸಕಾರ ಅರೆಹಳ್ಳಿ ಧರ್ಮೇಂದ್ರ, ಉಷಾ ಮೋಹನ್, ವಿಜಯಸಿಂಗ್ ಗ್ಯಾನ ಮಧು, ನೀಲಕಂಠಪ್ಪ, ರಾಜಣ್ಣ, ಸಹಿತ ವಿವಿಧ ಸಂಘಟನೆಗಳ ಹಲವು ನಾಯಕರು ಭಾಗಿಯಾಗಿದ್ದರು.

Related posts