ಖಾಲಿ ಬಿಂದಿಗೆ ಹೊತ್ತು ‘ಕಾವೇರಿ ನೀರು ಉಳಿಸಿ’ ಧರಣಿ; ಫ್ರೀಡಂ ಪಾರ್ಕಲ್ಲಿ 4ನೇ ದಿನವೂ ಜಲ ಸಂರಕ್ಷಣಾ ಸಮಿತಿ ಹೋರಾಟ

ಬೆಂಗಳೂರು; ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರ್ನಾಟಕ ಜಲಸಂರಕ್ಷಣಾ ಸಮಿತಿ ತನ್ನ ಹೋರಾಟವನ್ನು ತೀವ್ರಗೊಳಿಸಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಗುರುವಾರ 4ನೇ ದಿನವೂ ಮುಂದುವರಿಯಿತು. ಖಾಲಿ ಬಿಂದಿಗೆ ಹೊತ್ತು ‘ಕಾವೇರಿ ನೀರು ಉಳಿಸಿ’ ಎಂದು ನಡೆಸಿದ ಧರಣಿ ಗಮನಸೆಳೆಯಿತು. ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಬೆದರಿಕೆಗೆ ಅಂಜಿ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುವ ನೀರು ನಿಲ್ಲಿಸದಿದ್ದರೆ ರಾಜ್ಯದ ಉದ್ದಗಲಕ್ಕೂ ಮಂತ್ರಿಗಳಿಗೆ ಘೇರಾವ್ ಮಾಡುವ ಚಳುವಳಿ, ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ ಹೋರಾಟಗಾರರು ಈ ವಿಚಾರದಲ್ಲಿ ಸರ್ಕಾರ ರಾಜ್ಯದ ಹಿತವನ್ನು ನಿರ್ಲಕ್ಷಿಸಿದರೆ ದಸರಾ ಆಚರಣೆಗೆ ಅಡ್ಡಿ ಪಡಿಸುವುದಾಗಿ ಎಚ್ಚರಿಕೆ ಮಾಡಬೇಕಾಗುತ್ತದೆ ಎಂಬ ಸಂದೇಶವನ್ನು ರವಾನಿಸಿದರು. ಧರಣಿ ಸತ್ಯಾಗ್ರಹ ಸಂದರ್ಭದಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್, ರಾಜ್ಯದ ಮುಖ್ಯಮಂತ್ರಿ, ನೀರಾವರಿ ಮಂತ್ರಿಗೆ ಇಂಡಿಯಾ ಒಕ್ಕೂಟ ಬೇಕೂ ಅಥವಾ ರಾಜ್ಯದ…