ಬೆಂಗಳೂರು: ಕಾವೇರಿಗಾಗಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶುಕ್ರವಾರ ೫ನೇ ದಿನವೂ ಧರಣಿ ಮುಂದುವರಿಸಿದ ಕರ್ನಾಟಕ ಜಲ ಸಂರಕ್ಷಣ ಸಮಿತಿ ಕಾರ್ಯಕರ್ತರು, ಈ ವಿವಾದ ಬಗೆಹರಿಸುವ ಸಂಬಂಧ ರಾಷ್ಟ್ರಪತಿ ಭೇಟಿಗೆ ಜಲ ಸಂರಕ್ಷಣ ಸಮಿತಿ ತಯಾರಿ ನಡೆಸಿದೆ. ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಈ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು, ಹೋರಾಟದ ನೇತೃತ್ವ ವಹಿಸಿರುವ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರಾಜ್ಯ ಸರ್ಕಾರದ ನಡೆ ಬಗ್ಗೆ ಆಕ್ರೋಶ ಹೊರಹಾಕಿದರು. ಧರಣಿ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ರೈತರಿಗೆ ಗಿಳಿಪಾಠ ಹೇಳುವ ಡಿ.ಕೆ..ಶಿವಕುಮಾರ್, ತಮಿಳುನಾಡು ರಾಜ್ಯದಲ್ಲಿ ಮೂರು ಬೆಳೆ ಬೆಳೆಯುವುದಕ್ಕೆ ಕಡಿವಾಣ ಹಾಕುವ ಕೆಲಸಕ್ಕೆ ಮುಂದಾಗಲಿ ನೋಡೋಣ ಎಂದು ಸವಾಲು ಹಾಕಿದರು. ನೀರಾವರಿ ಮಂತ್ರಿಯಾಗಿ ಅವರು ‘ಇಂಡಿಯಾ’ ಒಕ್ಕೂಟ ಬಲಪಡಿಸುವ ಚಿಂತೆಯಲ್ಲಿದ್ದಾರೆ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಓಲೈಸುವ ಕಾರಣದಿಂದಲೇ ರಾಜ್ಯದ ನೀರು ಬಿಟ್ಟು ರೈತರನ್ನ ಬಲಿಕೊಟ್ಟಿದ್ದಾರೆ. ಅವರ ಸ್ನೇಹ…