ದೆಹಲಿ: ಕರ್ನಾಟಕದ ಕಾವೇರಿ ನೀರಿನ ಸಂಕಷ್ಟದ ಬಗ್ಗೆ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನಿಯೋಗ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. 9ರಂದು ಬೆಳಿಗ್ಗೆ ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಕೇಂದ್ರ ಸಚಿವರ ಗೃಹ ಕಚೇರಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಜಲ ಸಂರಕ್ಷಣಾ ಸಮಿತಿ ನಿಯೋಗ ಭೇಟಿ ಮಾಡಿದೆ. ಸಚಿವರ ಜೊತೆ ಸುಮಾರು 20 ನಿಮಿಷಗಳ ಕಾಲ ವಿಸೃತ ಚರ್ಚೆ ನಡೆಸಿ ಕರ್ನಾಟಕದ ಸಂಕಷ್ಟದ ಪರಿಸ್ಥಿತಿಯನ್ನು ವಿವರಿಸಲಾಯಿತು ನಿಯೋಗದಲ್ಲಿದ್ದ ಕರ್ನಾಟಕ ಜಲಸಂರಕ್ಷಣಾ ಸಮಿತಿಯ ಮುಖ್ಯಸ್ಥ, ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ . ಕರ್ನಾಟಕದ ಜನರು 25 ಜನ ಬಿಜೆಪಿ ಎಂ ಪಿ ಗಳನ್ನ ಆಯ್ಕೆ ಮಾಡಿ ಕಳಿಸಿದ್ದಾರೆ ಈ ಸರ್ಕಾರದಿಂದಲೇ ನಮಗೆ ಅನ್ಯಾಯವಾಗುತ್ತಿದೆ ರಾಜ್ಯದ ರೈತರ ಬಲಿಕೊಡುವಂತಾಗಿದೆ ರೈತರು ಕೃಷಿ ತೊರೆದು ವಲಸೆ ಹೋಗುತ್ತಿದ್ದಾರೆ ,ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ, ಎಂಟು ತಿಂಗಳು ಯಾವುದೇ ಬೆಳೆ…