ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ಭಾಗದ ಪೊನ್ನಾಚಿ ಅರಣ್ಯ ಪ್ರದೇಶದಲ್ಲಿ ತೊಂದರೆ ಕೊಡುತ್ತಿದ್ದ ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಪೊನಾಚಿ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಾದ ಕೆಕ್ಕೆಹೊಲ, ಅಸ್ತೂರು, ಮರೂರು ಇನ್ನಿತರೆ ಗ್ರಾಮಗಳಿಗೆ ಪುಂಡಾನೆಯು ಕಳೆದ ನಾಲ್ಕು ಐದು ತಿಂಗಳಿಂದ ದಾಳಿ ಮಾಡಿ ರೈತರು ಬೆಳೆದಿದ್ದ ಫಸಲುಗಳನ್ನು ನಾಶಪಡಿಸುತ್ತಿತ್ತು .ಹಾಗೂ ಗ್ರಾಮದೊಳಗೆ ನುಗ್ಗಿ ಮನೆಯ ಗೇಟ್, ಬೈಕ್‌ಗಳಿಗೂ ಸಹ ಹಾನಿ ಮಾಡಿತ್ತು. ಆಗಸ್ಟ್ 7 ರಂದು ಪೊನ್ನಾಚಿ ಹಾಗೂ ತಾಳಬೆಟ್ಟ ಮಾರ್ಗ ಮಧ್ಯದಲ್ಲಿ ಪುಂಡಾನೆಯು ಕೆಎಸ್ಆರ್ ಟಿ ಸಿ ಬಸ್ಸಿಗೆ ಅಡ್ಡಲಾಗಿ ನಿಂತು ಬಸ್ಸನ್ನು ಅಟ್ಟಾಡಿಸಿ ಪ್ರಯಾಣಿಕರಲ್ಲಿ ಕೆಲಕಾಲ ಆತಂಕವನ್ನು ಸೃಷ್ಟಿಸಿತ್ತು. ಪುಂಡಾನೆಯಿಂದ ಭಯಭೀತಿಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪುಂಡಾನೆಯನ್ನು ಸೆರೆಹಿಡಿದು ಬೇರೆಡೆಗೆ ಸಾಗಿಸುವಂತೆ ಮನವಿಯನ್ನು ಮಾಡಿದರು ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪುಂಡಾನೆಯನ್ನು ಸೆರೆ ಹಿಡಿಯಲು…