ನೀರು ಬಿಡಲು ಬೆದರಿಕೆ ಇತ್ತೇ? ಕಾಂಗ್ರೆಸ್ ಒತ್ತಡ ಇದ್ದೀತೇ?: ಸಿ.ಟಿ.ರವಿ

ಬೆಂಗಳೂರು: ತಮಿಳುನಾಡಿಗೆ ಮುಂಚಿತವಾಗಿಯೇ ನೀರು ಬಿಡಲು ನಿಮಗೇನಾದರೂ ಬೆದರಿಕೆ ಇತ್ತೇ? ಪಾರ್ಟಿಯಿಂದ ಒತ್ತಡ ಇತ್ತೇ? ಬೇಡಿಕೆ ಇಡುವ ಮೊದಲೇ ನೀರು ಬಿಟ್ಟಿದ್ದೇಕೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಕ್ಷೇಪಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇಂಡಿಯ ಮೈತ್ರಿಕೂಟದ ಭಾಗವಾಗಲು ನೀರು ಬಿಡಿ ಎಂದು ಡಿಎಂಕೆ ಬೆದರಿಕೆ ಹಾಕಿರಬಹುದು. ಇಲ್ಲವೇ ಕಾಂಗ್ರೆಸ್ ಹೈಕಮಾಂಡ್ ಒತ್ತಡ ಹಾಕಿರಬಹುದು ಎಂದು ಸಂಶಯ ವ್ಯಕ್ತಪಡಿಸಿದರು. ನೀರು ಬಿಟ್ಟ ಬಳಿಕ ಸರ್ವಪಕ್ಷ ಸಭೆ, ಸಂಸದರ ಸಭೆ ನಡೆಸಿದ್ದನ್ನೂ ಅವರು ಟೀಕಿಸಿದರು. ಬಳಿಕ ಅಹವಾಲು ಮಂಡನೆಯನ್ನು ಆಕ್ಷೇಪಿಸಿದರು. ರಾಜ್ಯದ ರೈತರ ಸಂಕಷ್ಟ ದೂರ ಮಾಡುವುದರ ಬದಲು ತಮಿಳುನಾಡಿನ ರಾಜಕೀಯ ಪರಿಸ್ಥಿತಿಯ ಲಾಭ ಪಡೆಯುವ ಪ್ರಯತ್ನ ಇದ್ದಂತಿದೆ. ಇದಕ್ಕೆ ಕರ್ನಾಟಕ ಬಲಿಪಶು ಆಗಿದೆ ಎಂದು ಸಿ.ಟಿ.ರವಿ ಅಭಿಪ್ರಾಯಪಟ್ಟರು. ಕಾಂಗ್ರೆಸ್ ಸರಕಾರವು ಕಾವೇರಿ…

ಸುಧಾಕರರನ್ನು ಸಚಿವ ಸ್ಥಾನದಿಂದ ಕೈಬಿಡಿ: ಸಿ.ಟಿ.ರವಿ

ಬೆಂಗಳೂರು: ದಲಿತರ ಆಸ್ತಿ ಕಬಳಿಸಿ ದೌರ್ಜನ್ಯ ನಡೆಸಿದ್ದಾರೆಂದು ಕಾಂಗ್ರೆಸ್ ಸಚಿವ ಡಿ.ಸುಧಾಕರ್ ಅವರ ಮೇಲೆ ದೂರು ದಾಖಲಾಗಿದೆ. ಸಚಿವರ ಮೇಲೆ ದೂರು ದಾಖಲಾಗಿ ಮೇಲ್ನೋಟಕ್ಕೆ ಸತ್ಯವಿದೆ ಎಂದು ಕಂಡುಬಂದಾಗ ನಿಷ್ಪಕ್ಷಪಾತ ತನಿಖೆಗಾಗಿ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು. ಬಳಿಕ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯ. ಆದ್ದರಿಂದ ಅವರನ್ನು ಸಚಿವಸಂಪುಟದಿಂದ ಕೈಬಿಡಿ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಗ್ರಹಿಸಿದ್ದಾರೆ ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸದಾ ಕಾಲ ದಲಿತರ ಪರ ಎನ್ನುವ ಮಹದೇವಪ್ಪ ಹಾಗೂ ಸಿಎಂ, ಗೃಹಸಚಿವರ ಸೇರಿ ಎಲ್ಲ ಖಾತೆಗಳ ಜಿಪಿಎ ಪಡೆದ ಪ್ರಿಯಾಂಕ್ ಖರ್ಗೆಯವರು ಈ ವಿಷಯದಲ್ಲಿ ಮೌನವಾಗಿದ್ದಾರೆ. ಅವರ ಮೌನ ಹಲವು ಅನುಮಾನಗಳನ್ನು ಸೃಷ್ಟಿಸುತ್ತದೆ. ಅವರು ಮೌನ ವಹಿಸಬಾರದೆಂದು ಒತ್ತಾಯಿಸಿದರು. 4 ತಿಂಗಳಾದರೂ ವರ್ಗಾವಣೆ ಗೊಂದಲ ಬಗೆಹರಿದಿಲ್ಲ. 115 ಪೊಲೀಸ್ ಅಧಿಕಾರಿಗಳಿಗೆ ಜಾಗ ತೋರಿಸದೆ, ಕೆಲಸವನ್ನೂ…