Indian Navy Day; ಭಾರತೀಯ ನೌಕಾಪಡೆ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಸೆಲ್ಯೂಟ್

ದೆಹಲಿ: ಭಾರತೀಯ ನೌಕಾಪಡೆಯ ದಿನಾಚರಣೆಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಗುರುವಾರ ನೌಕಾಪಡೆಯ ಎಲ್ಲ ಅಧಿಕಾರಿಗಳು–ಸಿಬ್ಬಂದಿಗೆ ಶುಭಾಶಯ ತಿಳಿಸಿ, ದೇಶದ ಸಮುದ್ರ ಗಡಿಗಳ ರಕ್ಷಣೆಯಲ್ಲಿ ಪಡೆ ತೋರಿಸುತ್ತಿರುವ ಶೌರ್ಯ, ಸ್ವಾವಲಂಬನೆ ಮತ್ತು ಆಧುನೀಕರಣದ ಬದ್ಧತೆಯನ್ನು ಪ್ರಶಂಸಿಸಿದರು. ಡಿಸೆಂಬರ್ 4 ಅನ್ನು ಪ್ರತಿವರ್ಷ ನೌಕಾಪಡೆಯ ದಿನವಾಗಿ ಆಚರಿಸಲಾಗುತ್ತದೆ. 1971ರ ಯುದ್ಧದಲ್ಲಿ ‘ಆಪರೇಷನ್ ಟ್ರೈಡೆಂಟ್’ ಮೂಲಕ ಪಾಕಿಸ್ತಾನಿ ನೌಕಾಪಡೆಯ ಮೇಲೆ ಭಾರತ ಪಡೆದ ಐತಿಹಾಸಿಕ ಗೆಲುವಿಗೆ ಈ ದಿನಾಂಕ ಸ್ಮರಣಾರ್ಥವಾಗಿದೆ. Xನಲ್ಲಿ ಬರಹ ಹಂಚಿಕೊಂಡ ಪ್ರಧಾನಮಂತ್ರಿ’ “ನಮ್ಮ ನೌಕಾಪಡೆ ಅಸಾಧಾರಣ ಧೈರ್ಯ ಮತ್ತು ದೃಢಸಂಕಲ್ಪಕ್ಕೆ ಹೆಸರಾಗಿದ್ದು, ದೇಶದ ತೀರಗಳನ್ನು ಕಾಪಾಡುತ್ತಾ ನಮ್ಮ ಕಡಲ ಹಿತಾಸಕ್ತಿಗಳನ್ನು ರಕ್ಷಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸ್ವಾವಲಂಬನೆ ಮತ್ತು ಆಧುನೀಕರಣದತ್ತ ಪಡೆ ತೆಗೆದುಕೊಂಡ ಹೆಜ್ಜೆಗಳು ದೇಶದ ಭದ್ರತಾ ಸಾಮರ್ಥ್ಯವನ್ನು ಹೆಚ್ಚಿಸಿವೆ” ಎಂದಿದ್ದಾರೆ. ದೀಪಾವಳಿ ವೇಳೆ ಐಎನ್‌ಎಸ್ ವಿಕ್ರಾಂಟ್‌ನಲ್ಲಿ ನೌಕಾ ಸಿಬ್ಬಂದಿಯೊಂದಿಗೆ ಕಳೆದ ಕ್ಷಣಗಳನ್ನು ನೆನೆದು, ಅವು ಸದಾ…