ನವದೆಹಲಿ: ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿ ರವಾನಿಸುತ್ತಿದ್ದ ಆರೋಪದಲ್ಲಿ ರಾಷ್ಟ್ರೀಯ ತನಿಕಾ ತಂಡ NIA ಮೂವರನ್ನು ಬಂಧಿಸಿದೆ. ಭಾರತದ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿ ಪಾಕಿಸ್ತಾನ ಮೂಲದ ಗುಪ್ತಚರ ಅಧಿಕಾರಿಗಳಿಗೆ ನೀಡಿದ ಆರೋಪದಲ್ಲಿ ವೇತನ್ ಲಕ್ಷ್ಮಣ್ ತಂಡೇಲ್, ಅಕ್ಷಯ್ ರವಿ ನಾಯಕ್ ಹಾಗೂ ಅಭಿಲಾಷ್ ಎಂಬವರನ್ನು ಬಂಧಿಸಲಾಗಿದೆ ಎಂದು NIA ಮೂಲಗಳು ತಿಳಿಸಿವೆ. ಕಾರವಾರ ನೌಕಾ ನೆಲೆ ಮತ್ತು ಕೊಚ್ಚಿ ನೌಕಾ ನೆಲೆಯಲ್ಲಿರುವ ಭಾರತೀಯ ರಕ್ಷಣಾ ಸಂಸ್ಥೆಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಈ ಆರೋಪಿಗಳು ಸೋರಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾರವಾರ ಹಾಗೂ ಕೊಚ್ಚಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು NIA ಅಧಿಕಾರಿಗಳು ತಿಳಿಸಿದ್ದಾರೆ.