ಅಲಯನ್ಸ್ ವಿವಿ: ‘ವಿಕಸಿತ ಭಾರತದಲ್ಲಿ ಮಹಿಳೆಯರ ಪಾತ್ರ’.. ಹೀಗೊಂದು ಮಾತು-ಮಂಥನ

ಬೆಂಗಳೂರು: ಸದಾ ಒಂದಿಲ್ಲೊಂದು ಪ್ರಯೋಗಶೀಲ ಅಧ್ಯಯನದಿಂದ ಸುದ್ದಿಯ ಕೇಂದ್ರಬಿಂದುವಾಗುತ್ತಿರುವ ಬೆಂಗಳೂರಿನ ‘ಅಲಯನ್ಸ್ ವಿಶ್ವವಿದ್ಯಾಲಯ’ದಲ್ಲಿ ನಡೆದ  ‘ವಿಕಸಿತ ಭಾರತದಲ್ಲಿ ಮಹಿಳೆಯರ ಪಾತ್ರ”ವಿಚಾರ ಸಂಕಿರಣ ಅರ್ಥಪೂರ್ಣ ಕಾರ್ಯಕ್ರಮವಾಗಿ ಗಮನಸೆಳೆಯಿತು.  ಅಲಯನ್ಸ್ ಮಹಿಳಾ ಸಬಲೀಕರಣ ಕೇಂದ್ರದ ವತಿಯಿಂದ  ಶನಿವಾರ ನಡೆದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾಲತಿ ಕೃಷ್ಣಮೂರ್ತಿ ಹೊಳ್ಳ, ನಟಿ ಮೇಘನಾ ಗಾಂವ್ಕರ್  ಉದ್ಘಾಟಿಸಿದರು. ಚಿಂತನಶೀಲ ಯುವಜನ ಸಮೂಹವನ್ನುದ್ದೇಶಿಸಿ ಮಾತನಾಡಿದ ಮಾಲತಿ ಕೃಷ್ಣಮೂರ್ತಿ ಹೊಳ್ಳ, ಮುಂದಿನ ಗುರಿಯೊಂದಿಗೆ ಇಂದಿನ ಕನಸುಗಳನ್ನು ನನಸು ಮಾಡಬೇಕಾದ ಜವಬ್ದಾರಿ ಮಹಿಳೆಯರ ಮೇಲಿದೆ. ಈ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಮಹಿಳೆಯರು ಕೊಡುಗೆ ನೀಡಬೇಕು. ನೂನ್ಯತೆಗಳನ್ನು ಎದುರಿಸಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ತಮಗೆ ದೇಹದಲ್ಲಿ ವಿಕಲತೆಯಿರಬಹುದು ಆದರೆ ಆತ್ಮವಿಶ್ವಾಸ, ಗುರಿ ಸಾಧಿಸುವ ಛಲ, ಕನಸುಗಳಲ್ಲಿ ಯಾವುಏ ನ್ಯೂನತೆಯಿಲ್ಲ. ಇದರಿಂದಾಗಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ವಿಲೇಚೇರ್ ನನಗೆ ಸಿಂಹಾಸನದಂತಾಗಿದೆ. ಹಾಗಾಗಿ…