ಮಂಜೇಶ್ವರ ಅನಂತೇಶ್ವರ ದೇವಸ್ಥಾನ 221 ನೇ ವರ್ಷದ ಪುನರ್ ಪ್ರತಿಷ್ಠಾ ವರ್ದ೦ತಿ

ಚಿತ್ರ : ಮಂಜು ನೀರೇಶ್ವಾಲ್ಯ ಮಂಜೇಶ್ವರ: ಕರಾವಳಿಯ ಪುರಾಣ ಪ್ರಸಿದ್ಧ ದೇವಾಲಯಗಳಲ್ಲೊಂದಾಗಿರುವ ಮಂಜೇಶ್ವರದ ಶ್ರೀಮದ್ ಅನಂತೇಶ್ವರ ದೇವಸ್ಥಾನ ವಿಶೇಷ ಮಹೋತ್ಸವಕ್ಕೆ ಸಾಕ್ಷಿಯಾಗಿದೆ. ಈ ದೇವಾಲಯದ 221 ನೇ ವರ್ಷದ ಪುನರ್ ಪ್ರತಿಷ್ಠಾ ವರ್ದ೦ ತಿ ಹಾಗೂ ಬೆಳ್ಳಿ ಲಾಲ್ಕಿ ಯ 150 ನೇ ವರ್ಷದ ಸಂಭ್ರಮೋತ್ಸವ ಐತಿಹಾಸಿಕವಾಗಿ ಅಪೂರ್ವ ವಿಜೃಂಭಣೆಯಿಂದ ನೆರವೇರಿದೆ. ಸೋಮವಾರ ಬೆಳಿಗ್ಗೆ ಬೆಳ್ಳಿ ಪಲ್ಲಕಿ ಹಗಲೋತ್ಸವ , ಮಧ್ಯಾಹ್ನ ಸಮಾಜ ಭಾಂದವರಿಂದ ಶ್ರೀ ನರಸಿಂಹ ಸ್ತುತಿ ಪಠಣ ದೊಂದಿಗೆ ಪ್ರದಕ್ಷಿಣಾ ಸೇವೆ ನಡೆಯಿತು. ಸಮೃದ್ಧವಾದ ನಿರೀಕ್ಷಣಾ ವಸ್ತುಗಳು ಶ್ರೀ ದೇವರಿಗೆ ವಾದ್ಯ ಘೋಷ್ಠಿಯೊಂದಿಗೆ ಸಮರ್ಪಣೆ ಮಡಿದ ಸನ್ನಿವೇಶವೂ ಭಕ್ತ ಸಮೂಹದ ಗಮನಕೇಂದ್ರೀಕರಿಸಿತು. ರಾತ್ರಿ 150 ನೇ ವರ್ಷದ ಬೆಳ್ಳಿ ಲಾಲಕಿಗೆ ಅಪೂರ್ವ ಅಲಂಕಾರದೊಂದಿಗೆ ಉತ್ಸವ ಹಾಗೂ ಪೂಜಾ ಸೇವೆ, ಉತ್ಸವದಲ್ಲಿ ಅದ್ಧುರಿ ವಾದ್ಯಘೋಷ್ಠಿ, ಕಣ್ಮನ ಸಂತೈಸುವ ವಿಶೇಷ ದೀಪಾರಾಧನೆ ನೆರವೇರಿತು.

ಮಂಗಳೂರು ರಥಬೀದಿ ಶ್ರೀ ಕುಡ್ತೆರಿ ಮಹಾಮಾಯ ದೇವಸ್ಥಾನದ ‘ಬ್ರಹ್ಮರಥೋತ್ಸವ’ ವೈಭವ

ಮಂಗಳೂರು: ಆಸ್ತಿಕರ ನಾಡು, ರಾಜ್ಯ ಕರಾವಳಿ ಇದೀಗ ಸಾಲು ಸಾಲು ವೈದ್ಧಿಕ ಕೈಂಕರ್ಯಗಳಿಗೆ ಸಾಕ್ಷಿಯಾಗುತ್ತಿವೆ. ಅದರ ನಡುವೆಯೇ ಮಂಗಳೂರಿನಲ್ಲಿ ನೆರವೇರಿದ ‘ಮಹಾಮಾಯ ರಥೋತ್ಸವ’ವು ಮಹಾ ವೈಭವವಾಗಿ ಗಮನಸೆಳೆಯಿತು. ಮಂಗಳೂರು ನಗರದ ರಥಬೀದಿಯಲ್ಲಿರುವ ಶ್ರೀ ಕುಡ್ತೆರಿ ಮಹಾಮಾಯ ದೇವಸ್ಥಾನದ ಬ್ರಹ್ಮರಥೋತ್ಸವ ಮಂಗಳವಾರ ಭಕ್ತಸಾಗರದ ನಡುವೆ ವಿಜೃಂಭಣೆಯಿಂದ ಜರಗಿತು. ಬೆಳಿಗ್ಗೆ ಮಹಾಪ್ರಾರ್ಥನೆ ಬಳಿಕ ಶ್ರೀ ದೇವರಿಗೆ ಶತ ಕಲಶಾಭಿಷೇಕ , ಗಂಗಾಭಿಷೇಕ , ಪುಳಕಾಭಿಷೇಕ , ಕನಕಾಭಿಷೇಕ ಗಳು ನಡೆದವು. ಯಜ್ಞ ಮಂಟಪದಲ್ಲಿ ನಡೆದ ಮಹಾ ಪೂರ್ಣಾಹುತಿ ಸಂದರ್ಭದಲ್ಲಿ ಧರ್ಮಿಕ ಪ್ರಮುಖರು ಯತಿಗಳು ಭಾಗಿಯಾದರು. ಸಂಜೆ ಬೆಳ್ಳಿ ಪಲ್ಲಕಿಯಲ್ಲಿ ಶ್ರೀ ದೇವರು ವಿರಾಜಮಾನರಾಗಿ ರಥಾರೋಹಣವು ಅನನ್ಯ ಮಹೋತ್ಸವವಾಗಿ ಆಸ್ತಿಕರ ಗಮನಕೇಂದ್ರೀಕರಿಸಿತು. ಭಕ್ತರು ರಥ ಎಳೆದು ಪುನೀತರಾದರು. ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಸಿ.ಎ.ಶ್ರೀನಿವಾಸ್ ಕಾಮತ್, ಮಾರೂರ್ ಸುಧೀರ್ ಪೈ, ಪ್ರಕಾಶ್ ಕಾಮತ್, ಅನಂತ್ ಭಟ್, ಗಣೇಶ್ ಭಟ್, ದಕ್ಷಿಣ ಕನ್ನಡ…