ಗ್ಯಾರೆಂಟಿ ‘ಶಕ್ತಿ’ಯ ಶತಕೋಟಿ ಸಂಭ್ರಮ; ಸಿಬ್ಬಂದಿ ಸಮೂಹಕ್ಕೆ ಚಿನ್ನದ ಪದಕದ ಸಂತಸ

ಬೆಂಗಳೂರು: ರಾಜ್ಯ ಸರ್ಕಾರದ ಮ್ಹವಾಕಾಂಕ್ಷಿ ‘ಗ್ಯಾರೆಂಟಿ’ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ’ಯ ಶತಕೋಟಿ ಸಂಭ್ರಮ ಸಮಾರಂಭ ಗಮನಸೆಳೆಯಿತು. ‘ಶಕ್ತಿ’ ಯೋಜನೆಯ ಪರಿಪೂರ್ಣ ಜಾರಿಯ ಜೊತೆಯಲ್ಲೇ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದ KSRTC ಚಾಲಕರನ್ನು ಅಭಿನಂಧಿಸಿ ಗೌರವಿಸಿದ ಸನ್ನಿವೇಶವೂ ಈ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿತು. ರಾಜ್ಯದ ಆಡಳಿತದ ‘ಶಕ್ತಿ’ಕೇಂದ್ರ ವಿಧಾನಸೌಧದಲ್ಲಿ ಶುಕ್ರವಾರ ‘ಶಕ್ತಿ’ ಗ್ಯಾರೆಂಟಿಯ ಶತಮಾನ ಸಂಭ್ರಮ ನೆರವೇರಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಹಿತ ಮಂತ್ರಿಗಳು, ಶಾಸಕರು, ಅಧಿಕಾರಿಗಳು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ಸಾರಿಗೆ ಸಂಸ್ಥೆಗಳ (KSRTC ಸಮೂಹ) ಅಪಘಾತ ರಹಿತ ಚಾಲಕರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಅಪಘಾತ ರಹಿತ ಚಾಲಕರಿಗೆ ಚಿನ್ನದ ಪದಕ ಪ್ರದಾನ ಮಾಡಿ ಗೌರವಿಸಲಾಯಿತು. ಏನಿದು ಚಿನ್ನದ ಪದಕದ ಪುರಸ್ಕಾರ? ಗ್ರಾಮಾಂತರ ಸಾರಿಗೆಗಳಲ್ಲಿ 15 ವರ್ಷಗಳ ಅಪಘಾತ…