‘ಆಪರೇಷನ್ ಸಿಂಧೂರ್’ನಲ್ಲಿ ಪಾಕಿಸ್ತಾನಿ ವಾಯುನೆಲೆಗಳು, ಕಮಾಂಡ್ ಕೇಂದ್ರಗಳು ಧ್ವಂಸ: ಏರ್ ಮಾರ್ಷಲ್ ಎ.ಕೆ.ಭಾರ್ತಿ

ನವದೆಹಲಿ: ‘ಆಪರೇಷನ್ ಸಿಂಧೂರ್’ ಮಿಲಿಟರಿ ಕಾರ್ಯಾಚರಣೆಯಲ್ಲಿ ಭಾರತವು ಇಡೀ ಪಶ್ಚಿಮ ಮುಂಭಾಗದಾದ್ಯಂತ ಪಾಕಿಸ್ತಾನಿ ವಾಯುನೆಲೆಗಳು, ಕಮಾಂಡ್ ಕೇಂದ್ರಗಳು, ಮಿಲಿಟರಿ ಮೂಲಸೌಕರ್ಯ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಂಘಟಿತ ಮತ್ತು ಮಾಪನಾಂಕ ನಿರ್ಣಯಿಸಿದ ರೀತಿಯಲ್ಲಿ ಹೊಡೆದುರುಳಿಸಿದೆ ಎಂದು ಏರ್ ಮಾರ್ಷಲ್ ಎ.ಕೆ.ಭಾರ್ತಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಭಾನುವಾರ ‘ಆಪರೇಷನ್ ಸಿಂಧೂರ್’ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಅವರು, ‘ನಾವು ದಾಳಿ ಮಾಡಿದ ನೆಲೆಗಳಲ್ಲಿ ಚಕ್ಲಾಲಾ, ರಫೀಕಿ ಮತ್ತು ರಹೀಂ ಯಾರ್ ಖಾನ್ ಸೇರಿದ್ದು, ಆಕ್ರಮಣವನ್ನು ಸಹಿಸಲಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಲಾಗಿದೆ ಎಂದರು. ಸರ್ಗೋಧಾ, ಭುಲಾರಿ ಮತ್ತು ಜಕೋಬಾಬಾದ್ ಮೇಲೆ ದಾಳಿಗಳು ನಡೆದವು ಎಂದು ಅವರು ಗಮನಸೆಳೆದರು.ನಮ್ಮ ಗಮನವು ಸಾವುನೋವುಗಳನ್ನು ಎಣಿಸುವುದರ ಮೇಲೆ ಅಲ್ಲ, ಬದಲಾಗಿ ಭಯೋತ್ಪಾದಕ ಗುರಿಗಳನ್ನು ಹೊಡೆಯುವುದರ ಮೇಲೆ ಇತ್ತು ಎಂದರು. “ನಮ್ಮ ಗುರಿ ಸಾವುನೋವುಗಳನ್ನು ಉಂಟುಮಾಡುವುದು ಅಲ್ಲ, ಆದರೆ ಒಂದು ವೇಳೆ ಅಂತಹ ಘಟನೆಗಳು ಸಂಭವಿಸಿದ್ದರೆ,…

‘ಆಪರೇಷನ್ ಸಿಂಧೂರ್’ ಸ್ವಾಗತಿಸಿದ ಓವೈಸಿ; ಇದು ಪಾಕಿಸ್ತಾನಕ್ಕೆ ಪಾಠ ಎಂದ AIMIM ನಾಯಕ

ಹೈದರಾಬಾದ್: ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಅಡಗುತಾಣಗಳ ಮೇಲಿನ ದಾಳಿಯನ್ನು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಸ್ವಾಗತಿಸಿದ್ದಾರೆ. ರಕ್ಷಣಾ ಪಡೆಗಳ ಕ್ರಮವನ್ನು ಸ್ವಾಗತಿಸಲು ಓವೈಸಿ ‘X’ ನಲ್ಲಿ ಪ್ರತಿಕ್ರಿಯಿಸಿರುವ ಅಸಾದುದ್ದೀನ್ ಓವೈಸಿ ‘ಇದು ಪಾಕಿಸ್ತಾನಕ್ಕೆ ಪಾಠ’ ಎಂದು ಪ್ರತಿಪಾದಿಸಿದ್ದಾರೆ. “ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಅಡಗುತಾಣಗಳ ಮೇಲೆ ನಮ್ಮ ರಕ್ಷಣಾ ಪಡೆಗಳು ನಡೆಸಿದ ಗುರಿ ದಾಳಿಗಳನ್ನು ಸ್ವಾಗತಿಸುತ್ತೇನೆ. ಪಾಕಿಸ್ತಾನಕ್ಕೆ ಪಾಠ ಕಲಿಸಬೇಕು, ಇದರಿಂದ ಬೇರೆ ಯಾವುದೇ ಪಹಲ್ಗಾಮ್ ಘಟನೆ ನಡೆಯದು. ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯ ನಾಶವಾಗಬೇಕು” ಎಂದು ಓವೈಸಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ. ಎಸ್. ಜಗನ್ ಮೋಹನ್ ರೆಡ್ಡಿ ಕೂಡ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ಅನ್ನು ಶ್ಲಾಘಿಸಿದ್ದಾರೆ. “ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ನಿರ್ಣಾಯಕ ಪ್ರತಿಕ್ರಿಯೆಯಾಗಿ ಭಾರತೀಯ ರಕ್ಷಣಾ…

‘ಆಪರೇಷನ್ ಸಿಂಧೂರ್’ ಬಗ್ಗೆ ಪಾಕ್ ಪ್ರತಿಕ್ರಿಯೆ ಹೀಗಿದೆ..

ನವದೆಹಲಿ: ಕೆಲವು ವರ್ಷಗಳ ಹಿಂದೆ ಭಾರತ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಅಪಹಾಸ್ಯ ಮಾಡಿದ್ದ ಪಾಕಿಸ್ತಾನಕ್ಕೆ ಈ ಬಾರಿ ಭಾರತೀಯ ಸೇನೆ ಭಯಾನಕ ಉತ್ತರ ನೀಡಿದೆ. ಅಂದು ಸರ್ಜಿಕಲ್ ಸ್ಟ್ರೈಕ್ ನಡೆದಿಲ್ಲ ಎನ್ನುತ್ತಿದ್ದ ಪಾಕಿಸ್ತಾನ ಈ ಬಾರಿ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆದಿರುವುದನ್ನು ಒಪ್ಪಿಕೊಂಡಿದೆ. ಪಾಕಿಸ್ತಾನಿ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಕೂಡ ತಮ್ಮ ದೇಶದ ಮೇಲೆ ದಾಳಿ ನಡೆಸಿರುವುದನ್ನು ದೃಢಪಡಿಸಿದ್ದಾರೆ. “ಆಕ್ರಮಿತ ಕಾಶ್ಮೀರದಲ್ಲಿ ಉಗ್ರಗಾಮಿ ದಾಳಿಯ ನಂತರ ಉಭಯ ದೇಶಗಳ ನಡುವಿನ ತೀವ್ರ ಉದ್ವಿಗ್ನತೆಯ ನಡುವೆ ಭಾರತವು ಕೋಟ್ಲಿ, ಬಹ್ವಲ್ಪುರ್ ಮತ್ತು ಮುಜಫರಾಬಾದ್ ಮೇಲೆ ಕ್ಷಿಪಣಿ ದಾಳಿ ನಡೆಸಿತು” ಎಂದು ಪಾಕಿಸ್ತಾನ ಸೇನೆ ದೃಢಪಡಿಸಿದೆ. ಇದೇ ವೇಳೆ, ಭಾರತ ಹೊಸ ಇತಿಹಾಸ ಬರೆದಿದೆ ಎಂದು ಪ್ರಧಾನಿಯವರ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ. ಮಿಲಿಟರಿ ವೀಡಿಯೋವೊಂದನ್ನು ಅವರು…

“ನ್ಯಾಯ ಅಜೀವ..!’: ಆಪರೇಷನ್ ಸಿಂಧೂರ್ ಬಗ್ಗೆ ಸೇನೆ ಸಮರ್ಥನೆ

ನವದೆಹಲಿ: ಪಾಕಿಸ್ತಾನ ವಿರುದ್ದದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿರುವ ಭಾರತೀಯ ಸೇನೆ, ‘ನ್ಯಾಯ ಜೀವಂತವಾಗಿದೆ ಎಂದಿದೆ. ‘Justice is served’ ಎಂದು ಪಾಕಿಸ್ತಾನದ ಒಳಗಿನ 9 ನೆಲೆಗಳ ಮೇಲೆ ದಾಳಿ ನಂತರ ಭಾರತೀಯ ಸೇನೆ ಹೇಳಿಕೊಂಡಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಒಳಗಿನ ಒಂಬತ್ತು ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಭಾರತೀಯ ಸೇನೆ ಬುಧವಾರ ತಿಳಿಸಿದೆ. "प्रहाराय सन्निहिताः, जयाय प्रशिक्षिताः"Ready to Strike, Trained to Win.#IndianArmy pic.twitter.com/M9CA9dv1Xx — ADG PI – INDIAN ARMY (@adgpi) May 6, 2025 “ಸ್ವಲ್ಪ ಸಮಯದ ಹಿಂದೆ, ಭಾರತೀಯ ಸಶಸ್ತ್ರ ಪಡೆಗಳು ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಿದವು, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಲಾಯಿತು, ಅಲ್ಲಿಂದ ಭಾರತದ ವಿರುದ್ಧ ಭಯೋತ್ಪಾದಕ ದಾಳಿಗಳನ್ನು ಯೋಜಿಸಲಾಗಿದೆ…

‘ಆಪರೇಷನ್ ಸಿಂಧೂರ’: ಸೇನಾ ಧೈರ್ಯಕ್ಕೆ ಕಾಂಗ್ರೆಸ್ ಶ್ಲಾಘನೆ

ನವದೆಹಲಿ: ಪಹಲ್ಲಾಮ್ ಉಗ್ರರ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಉಗ್ರ ಪೋಷಕ ಪಾಕಿಸ್ತಾನದ ಮೇಲೆ ಭಾರತ ವಾಯುದಾಳಿ ನಡೆಸಿದ್ದು, ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡಿದೆ. ಬುಧವಾರ ತಡ ರಾತ್ರಿ ಪಾಕ್ ಆಕ್ರಮಿತ ಭಾರತ ಪ್ರದೇಶದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಈ ಕಾರ್ಯಾಚರಣೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ‘ಆಪರೇಷನ್ ಸಿಂಧೂರ’ವನ್ನು ಸ್ವಾಗತಿಸಿರುವ ಕಾಂಗ್ರೆಸ್, ಸೇನೆಯ ದೃಢನಿಶ್ಚಯ ಮತ್ತು ಧೈರ್ಯವನ್ನು ಶ್ಲಾಘಿಸಿದೆ. ‘ಆಪರೇಷನ್ ಸಿಂಧೂರ’ ಬಗ್ಗೆ ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಪಾಕಿಸ್ತಾನ ಮತ್ತು ಪಿಒಕೆಯಿಂದ ಹೊರಹೊಮ್ಮುವ ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧ ಭಾರತವು ದೃಢವಾದ ರಾಷ್ಟ್ರೀಯ ನೀತಿಯನ್ನು ಹೊಂದಿದೆ ಎಂದಿದ್ದಾರೆ. ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಮುಚ್ಚಿಹಾಕಿರುವ ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಬಗ್ಗೆ ನಮಗೆ ತುಂಬಾ ಹೆಮ್ಮೆಯಿದೆ. ಅವರ ದೃಢನಿಶ್ಚಯ ಮತ್ತು ಧೈರ್ಯವನ್ನು ನಾವು ಶ್ಲಾಘಿಸುತ್ತೇವೆ ಎಂದು…

ಭಾರತೀಯ ಮಹಿಳೆಯರ ಕುಂಕುಮ ಅಳಿಸಿದ್ದ ಪಾಕ್ ಪಾತಕಿಗಳಿಗೆ ‘ಸಿಂಧೂರ ಸ್ಟ್ರೈಕ್’..!

ನವದೆಹಲಿ: ಪಹಲ್ಲಾಮ್ ಉಗ್ರರ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಉಗ್ರ ಪೋಷಕ ಪಾಕಿಸ್ತಾನದ ಮೇಲೆ ಭಾರತ ವಾಯುದಾಳಿ ನಡೆಸಿದ್ದು, ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡಿದೆ. Pakistan pic.twitter.com/XuGFEMYjat — Mossad Commentary (@MOSSADil) May 6, 2025 ಬುಧವಾರ ತಡ ರಾತ್ರಿ ಪಾಕ್ ಆಕ್ರಮಿತ ಭಾರತ ಪ್ರದೇಶದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಈ ಕಾರ್ಯಾಚರಣೆಯಲ್ಲಿ ಹಲವು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಕಾರ್ಯಾಚರಣೆಗೆ ‘ಆಪರೇಷನ್ ಸಿಂಧೂರ್ ‘ ಎಂದು ಹೆಸರಿಸಲಾಗಿದೆ. ಈ ಕಾರ್ಯಾಚರಣೆಗೆ ‘ಆಪರೇಷನ್ ಸಿಂಧೂರ್ ‘ ಎಂದು ಹೆಸರಿಸಲು ಒಂದು ಕಾರಣವೂ ಇದೆ. ಪಹಲ್ಲಾಮ್ ದಾಳಿ ಸಂದರ್ಭದಲ್ಲಿ ಹಿಂದೂಗಳನ್ನೂ ಹುಡುಕಾಡಿ ಉಗ್ರರು ನರಮೇಧ ನಡೆಸಿದ್ದಾರೆ. ಕೇವಲ ಪುರುಷರನ್ನೇ ಗುಂಡಿಟ್ಟು ಕೊಂಡು ಮಹಿಳೆಯರ ಕುಂಕುಮ ಅಳಿಸಿದ್ದಾರೆ. ಈ ಕಾರಣದಿಂದಲೇ ಪಾಕ್ ಉಗ್ರರನ್ನು ಅಳಿಸಿಹಾಕುವ ಕಾರ್ಯಾಚರಣೆಯನ್ನು ಮೋದಿ ಸರ್ಕಾರ ಆರಂಭಿಸಿದೆ. 🚨 MASSIVE NEWS…

ಪಾಕ್ ಸ್ವಾಧೀನ ಪ್ರದೇಶದ ಮೇಲೆ ಭಾರತ ‘ಏರ್ ಸ್ಟ್ರೈಕ್’; ಉಗ್ರರ ಅಡಗುತಾಣಗಳು ಧ್ವಂಸ

ನವದೆಹಲಿ: ಪಹಲ್ಲಾಮ್ ಉಗ್ರರ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಉಗ್ರ ಪೋಷಕ ಪಾಕಿಸ್ತಾನದ ಮೇಲೆ ಭಾರತ ವಾಯುದಾಳಿ ನಡೆಸಿದ್ದು, ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡಿದೆ. ಬುಧವಾರ ತಡ ರಾತ್ರಿ ಪಾಕ್ ಆಕ್ರಮಿತ ಭಾರತ ಪ್ರದೇಶದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಈ ಕಾರ್ಯಾಚರಣೆಯಲ್ಲಿ ಹಲವು ಉಗ್ರರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. Pakistan pic.twitter.com/XuGFEMYjat — Mossad Commentary (@MOSSADil) May 6, 2025 ಪಹಲ್ಲಾಮ್ ಉಗ್ರರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಆತಂಕ ಕವಿದಿದೆ. ಪಾಕಿಸ್ತಾನಕ್ಕೆ ಹಲವು ರೀತಿಯಲ್ಲಿ ಹೊಡೆತ ನೀಡಿರುವ ಭಾರತ ಬುಧವಾರ ಮಧ್ಯರಾತ್ರಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಪ್ರದೇಶಗಳ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದೆ. ‘ಆಪರೇಷನ್ ಸಿಂಧೂರ್ ‘: ವರ್ಷಗಳ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದ ಭಾರತ ಈ ಬಾರಿ ಅದಕ್ಕಿಂತಲೂ ಭೀಕರ ಕಾರ್ಯಾಚರಣೆ ನಡೆಸಿದೆ. ಕೋಟ್ಲಿ,…