‘ಪೂವರಿ’ ಸಾರಥ್ಯದಲ್ಲಿ ‘ತುಡರ ಪರ್ಬೊದ ಪೊಲಬು’ ವಿಶಿಷ್ಠ ಕಾರ್ಯಕ್ರಮ

ತುಳು ಅಪ್ಪೆ ಕೂಟ ಮತ್ತು ಪೂವರಿ ಪತ್ರಿಕೆಯಿಂದ ತುಡರ ಪರ್ಬದ ಪೊಲಬು, ತುಳು ತಾಳಮದ್ದಳೆ ಕಾರ್ಯಕ್ರಮ.. ಕೃಷಿ ಸಂಸ್ಕೃತಿ ನಶಿಸುತ್ತಿದ್ದಂತೆ ಹಬ್ಬಗಳ ಸೊಗಡು ಮರೆಯಾಯಿತು ಎಂದ ಗಣ್ಯರು.. ಸಮಾರಂಭಕ್ಕೆ ಆಕರ್ಷಣೆ ತುಂಬಿದ ತಾಳಮದ್ದಳೆ ವೈಭವ.. ಮಂಗಳೂರು: ತುಳು ಪರಂಪರೆ, ಸಂಸ್ಕೃತಿ ವಿಚಾರದಲ್ಲಿ ನಿರಂತರ ಕಾರ್ಯಕ್ರಮಗಳ ಮೂಲಕ ತುಳುನಾಡಿನ ಸೊಗಡಿಗೆ ಶ್ರೀಮಂತಿಕೆ ತುಂಬುತ್ತಿರುವ ಏಕೈಕ ತುಳು ಮಾಸಿಕ ‘ಪೂವರಿ’ ಆಯೋಜಿಸಿದ ‘ತುಳು ಪರ್ಬೋ’ (ತುಳು ಹಬ್ಬ) ಗಮನಸೆಳೆಯಿತು. ಕಾರ್ಯಕ್ರಮದಲ್ಲಿ ಭಾಗಿಯಾದ ಗಣ್ಯರು ನಾಡು-ನುಡಿ-ವೈಭವ ಕುರಿತು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿ ಕುತೂಹಲದ ಕೇಂದ್ರಬಿಂದುವಾದರು. ತುಳುನಾಡಿನಲ್ಲಿ ಕೃಷಿ ಸಂಸ್ಕೃತಿಯ ಪ್ರತಿಫಲನ ಹಬ್ಬಗಳ ಆಚರಣೆಯಲ್ಲಿ ಪ್ರತಿಫಲಿಸುತ್ತಿತ್ತು. ಆದರೆ ಇಂದು ಕೃಷಿ ನಾಶವಾಗಿ ಸಿಮೆಂಟ್ ನೆಲದಲ್ಲಿ ಹಣತೆ ಹಚ್ಚುವ ಅನಿವಾರ್ಯತೆ ನಮ್ಮದಾಗಿದೆ. ಆದರೂ ಮುಂದಿನ ತಲೆಮಾರಿಗೆ ನಮ್ಮ ಆಚರಣೆಗಳನ್ನು ತಿಳಿಸಲು ಇದು ಅನಿವಾರ್ಯ ಎಂದು ವಕೀಲ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ…