ಬೆಂಗಳೂರು: ಈ ವರ್ಷದ ಕೊನೆಯ ಗ್ರಹಣ ಶನಿವಾರ (ಅಕ್ಟೋಬರ್ 28) ಸಂಭವಿಸಲಿದೆ. ಚಂದ್ರ ಗ್ರಹಣವು ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಗೋಚರಿಸಲಿದೆ. ಭಾರತದಲ್ಲಿ ಭಾಗಶಃ ಚಂದ್ರಗ್ರಹಣ ಗೋಚರಿಸಲಿದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ. ಈ ಚಂದ್ರಗ್ರಹಣದ ಒಟ್ಟು ಅವಧಿ 03 ಗಂಟೆ 07 ನಿಮಿಷಗಳು. ವಿಜ್ಞಾನ ಸಚಿವಾಲಯದ ಪ್ರಕಾರ, ಭಾಗಶಃ ಚಂದ್ರಗ್ರಹಣವು ಅಕ್ಟೋಬರ್ 28-29 ರಂದು ಸಂಭವಿಸಲಿದೆ. ಗ್ರಹಣ ಅಕ್ಟೋಬರ್ 29 ರಂದು ಭಾರತೀಯ ಕಾಲಮಾನ 01 ಗಂಟೆ 05 ನಿಮಿಷಕ್ಕೆ ಪ್ರಾರಂಭ. 02 ಗಂಟೆ 24 ನಿಮಿಷಕ್ಕೆ ಗ್ರಹಣ ಕೊನೆಗೊಳ್ಳುತ್ತದೆ. ಇದೇ ವೇಳೆ, ಈ ಗ್ರಹಣದ ಫಲಾಫಲಗಳ ಬಗ್ಗೆಯೂ ಚರ್ಚೆ ನಡೆದಿದೆ. ಕೆಲವು ರಾಶಿಗಳಿಗೆ ಗ್ರಹಣ ದೋಷ ಇರಲಿದೆ ಎನ್ನುತ್ತಿರುವ ಜ್ಯೋತಿಷಿಗಳು, ಮಿಥುನ, ಸಿಂಹ, ತುಲಾ ಮತ್ತು ಮಕರ ರಾಶಿ ಸೇರಿದಂತೆ ಕೆಲವು ರಾಶಿಯವರಿಗೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಿದ್ದಾರೆ. ಚಂದ್ರಗ್ರಹಣದ ಸೂತಕ ಸಮಯ: ಅಕ್ಟೋಬರ್ 28…