ಬೆಂಗಳೂರು: ದೇಶಾದ್ಯಂತ ಕೊರೋನಾ ವೈರಸ್ ಮರಣ ಮೃದಂಗ ಭಾರಿಸುತ್ತಲೇ ಇದೆ. ಹಾಗಾಗಿ ಲಾಕ್’ಡೌನ್ 5ನೇ ಅವಧಿಗೆ ಮುಂದುವರಿದಿದೆ. ಆದರೆ ಹೆಚ್ಚಿನ ಕಡೆ ಮಾರ್ಗಸೂಚಿಯಲ್ಲಿ ಸಡಿಲಿಕೆ ಮಾಡಲಾಗಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಜೂನ್ 8ರಿಂದ ದೇವಾಲಯ, ಚರ್ಚ್, ಮಸೀದಿ ಸೇರಿದಂತೆ ಇತರೆ ಪ್ರಾರ್ಥನಾ ಮಂದಿಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಸಂಬಂಧ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ದೇವಾಲಯಗಳಿಗೆ ತೆರಳುವ ಭಕ್ತರು ಮಾಸ್ಕ್ ಧರಿಸಬೇಕು. ದೇವಾಲಯಕ್ಕೆ ಬರುವ ಭಕ್ತರಿಗೆ ಜ್ವರ ಪರಿಶೀಲಿಸಬೇಕು. ಸ್ಯಾನಿಟೈಸರ್ ಗಳಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು ಖಡ್ಡಾಯ.
ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವವರು ಕನಿಷ್ಠ 1 ಮೀಟರ್ ಅಂತರವನ್ನು ಕಾಪಾಡಬೇಕು. ಜ್ವರ ಪರಿಶೀಲಿಸಬೇಕು. ಶುಕ್ರವಾರದ ಪ್ರಾರ್ಥನೆಯನ್ನು 20 ನಿಮಿಷಗಳೊಳಗಾಗಿ ಪೂರ್ಣಗೊಳಿಸಬೇಕು. ಆಹಾರ ವಿತರಣೆಯಂತಹಾ ಕ್ರಮಗಳಿಗೆ ಅವಕಾಶ ಇಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಸೀದಿ ಸೇರುವುದಕ್ಕೆ ಅನುಮತಿಯಿಲ್ಲ ಎಂದು ಸರ್ಕಾರ ಸೂಚಿಸಿದೆ.
ಇದನ್ನೂ ಓದಿ.. ಸಿಡಿಲು ಬಡಿದು ಪ್ರೇಮಸೌಧ ‘ತಾಜ್ ಮಹಲ್’ಗೆ ಹಾನಿ