ಬೆಂಗಳೂರು: ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡವನ್ನು ರಿಯಾಯಿತಿ ಮೊತ್ತದಲ್ಲಿ ಪಾವತಿಸಲು ಸರ್ಕಾರ ಮತ್ತೊಂದು ಅವಕಾಶ ನೀಡಿದೆ ಇತ್ತೀಚೆಗಷ್ಟೇ ಬಾಕಿ ದಂಡದ ಮೊತ್ತವನ್ನು ಶೇಕಡಾ 50ರ ರಿಯಾಯಿತಿಯಲ್ಲಿ ಪಾವತಿಸಲು ಅವಕಾಶ ನೀಡಲಾಗಿತ್ತು. ಸಾರ್ವಜನಿಕರು ನಾಮುಂದು ತಾ ಮುಂದು ಎಂದು ದಂಡದ ಹಣ ಪಾವತಿಸಲು ಮುಗಿಬಿದ್ದಿದ್ದರು. ಆದರೆ ಸಮಯಾವಕಾಶ ಲಬ್ಯವಿರಲಿಲ್ಲ. ಮತ್ತಷ್ಟು ದಿನಗಳ ಕಾಲ ಈ ಅವಕಾಶವನ್ನು ವಿಸ್ತರಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದರಿಂದ ಸರ್ಕಾರ ಮತ್ತೊಮ್ಮೆ ಈ ಅವಕಾಶವನ್ನು ಕಲ್ಪಿಸಿದೆ.
ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರು ಮಾರ್ಚ್ 4ರಿಂದ 15 ದಿನಗಳವರೆಗೆ ಶೇ.50 ರಿಯಾಯಿತಿಯಲ್ಲಿ ಪಾವತಿಸಬಹುದು.
11-02-2023ರ ಒಳಗಾಗಿ ಅನ್ವಯವಾಗುವ ಪ್ರಕರಣಗಳಿಗೆ ಮಾತ್ರ ಈ ಅವಕಾಶ ಕಲ್ಪಿಸಲಾಗಿದೆ.
ಒಂದು ಬಾರಿಯ ಕ್ರಮವಾಗಿ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರ ರಿಯಾಯಿತಿ ಸಿಗಲಿದೆ.
ಕರ್ನಾಟಕ ಒನ್ ವೆಬ್‌ಸೈಟ್‌ನಲ್ಲಿ ವಿವರ ಪಡೆದು ದಂಡ ಪಾವತಿಗೆ ಅವಕಾಶವಿದೆ. (ದಂಡದ ಮೊತ್ತ ಪಾವತಿಸಲು ಕ್ಲಿಕ್ ಮಾಡಿ- PAYMENT)
ಪೇಟಿಎಂ ಆ್ಯಪ್ ಮೂಲಕವೂ ವಿವರ ಪಡೆದು ಡಂಡದ ಮೊತ್ತವನ್ನು ಪಾವತಿಸಬಹುದು.