ಮುಂಬಯಿ: ಮಹಾರಾಷ್ಟ್ರದಲ್ಲಿ ರಾಜಕೀಯ ಜಂಘಿ ಕುಸ್ತಿ ಮುಂದುವರಿದಿದೆ. ಬಿಜೆಪಿ ಸರ್ಕಾರದ ಪತನಾನಂತರ ಇದೀಗ ಶಿವಸೇನೆಗೆ ಗದ್ದುಗೆ ಪ್ರಾಪ್ತಿಯಾಗಿದೆ. ಬಹುಮತ ಕೊರತೆಯ ಕಾರಣದಿಂದ ವಿಶ್ವಾಸಮತ ಯಾಚನೆಗೂ ಒಂದು ದಿನ ಮೊದಲೇ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರ ರಚನೆಗೆ ಹಾದಿ ಸುಗಮವಾಗಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್.ಸಿ.ಪಿ. ಕಾಂಗ್ರೆಸ್ ಪಕ್ಷಗಳು ಸೇರಿಕೊಂಡು ‘ಮಹಾರಾಷ್ಟ್ರ ವಿಕಾಸ್ ಅಘಾಡಿ’ಯನ್ನು ರೂಪಿಸಿಕೊಂಡಿದ್ದು ಇದರ ನಾಯಕನನ್ನಾಗಿ ಶಿವಸೇನೆಯ ಮುಖ್ಯಸ್ಥ ಉದ್ಭವ್ ಠಾಕ್ರೆ ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಲಿದ್ದು, ನವಂಬರ್ ೨೮ ರಂದು ಸಂಜೆ 05 ಗಂಟೆಗೆ ಮಹಾರಾಷ್ಟ್ರದ 19ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.