ಪೊಲೀಸ್ ಎನ್ ಕೌಂಟರ್; ಪಶುವೈದ್ಯೆ ಅತ್ಯಾಚಾರ, ಕೊಲೆ ಅರೋಪಿಗಳು ಸಾವು

ಹೈದರಾಬಾದ್ : ಪಶುವೈದ್ಯೆ ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಅರೋಪಿಗಳು ಪೊಲೀಸ್ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾರೆ. ಪೊಲೀಸರು ಈ ಆರೋಪಿಗಳನ್ನು ಸ್ಥಳ ಪರಿಶೀಲನೆಗೆ ಕರೆದೊಯ್ದ ಸಂದರ್ಭದಲ್ಲಿ ಎನ್ ಕೌಂಟರ್ ನಡೆದಿದೆ.

ಬೆಳಗಿನ ಜಾವ 3:30 ರ ವೇಳೆ ಅತ್ಯಾಚಾರ, ಕೊಲೆ ನಡೆದ ಸ್ಥಳ ಪರಿಶೀಲನೆಗೆ ತೆರಳಿದ ವೇಳೆ ನಾಲ್ವರು ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಎನ್ ಕೌಂಟರ್ ಮಾಡಿದ್ದು, ಆರೋಪಿಗಳಾದ ಚೆನ್ನ ಕೇಶವುಲು, ಆರೀಫ್, ಶಿವ, ನವೀನ್ ಗುಂಡಿಗೆ ಬಲಿಯಾಗಿದ್ದಾರೆ.

ಪೊಲೀಸ್ ಕಮೀಷನರ್ ವಿಶ್ವನಾಥ್ ಸಜ್ಜನರ್ ನೇತೃತ್ವದ ತಂಡ ಎನ್ ಕೌಂಟರ್ ನಡೆಸಿದೆ. 26 ವರ್ಷದ ಪಶುವೈದ್ಯೆ ದಿಶಾರನ್ನು ಸುಟ್ಟು ಹಾಕಿದ ಸ್ಥಳದಲ್ಲೇ ನಾಲ್ವರು ಆರೋಪಿಗಳು ಏನ್ ಕೌಂಟರ್ ಗೆ ಬಲಿಯಾಗಿರುವುದು ವಿಶೇಷ.

Related posts