ರಾಜ್ಯದಲ್ಲಿನ್ನು ಲಾಕ್’ಡೌನ್ ಇಲ್ಲ; ಪರ್ಯಾಯ ಕ್ರಮಕ್ಕೆ ಸೂಚಿಸಿದ ಸಿಎಂ

ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ವೈರಾಣು ಹಾವಳಿ ತೀವ್ರಗೊಂಡಿದ್ದರೂ ಜನರ ಹಾಗೂ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದಿರುವ ಸರ್ಕಾರ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರಲ್ಲಿ ಲಾಕ್’ಡೌನ್ ಮುಂಡಿವರಿಸದಿರಲು ನಿರ್ಧರಿಸಿದೆ.

ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ಬುಧ್ವಾರ ಬೆಳಗ್ಗೆ ಅಂತ್ಯವಾಗಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರು ಮಾತ್ರವಲ್ಲ ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಲಾಕ್ ಡೌನ್ ವಿಸ್ತರಿಸುವುದಿಲ್ಲ ಎಂದು ಅವರು ಹೇಳುವ ಮೂಲಕ ಲಾಕ್’ಡೌನ್ ಮುಂದುವರಿಕೆ ಬಗ್ಗೆ ಇದ್ದ ಅಂತೆ-ಕಂತೆಗಳಿಗೆ ಪೂರ್ಣವಿರಾಮ ಹಾಕಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯದ ಜನರನ್ನುದ್ದೇಶಿಸಿ ಮಾತನಾಡಿದ ಅವರು ಕೊರೋನಾ ನಿಯಂತ್ರಣಕ್ಕೆ ಲಾಕ್ ​ಡೌನ್​ ಒಂದೇ ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟರು.

ಕೋವಿಡ್​ ನಿಯಂತ್ರಣ ಸಂಬಂಧ ಜನರೇ ಸ್ವಯಂ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪರ್ಯಾಯ ಮಾರ್ಗ ಬಗ್ಗೆ ನೀತಿ ಪಾಠ ಹೇಳಿದರು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್​ಗಳನ್ನು ಧರಿಸಬೇಕು ಎಂದು ಸಿಎಂ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ.. ಸೆಪ್ಟೆಂಬರ್‌ನಲ್ಲಿ ಶಾಲೆ-ಕಾಲೇಜು ಆರಂಭ?

 

Related posts