ಸೆಪ್ಟೆಂಬರ್‌ನಲ್ಲಿ ಶಾಲೆ-ಕಾಲೇಜು ಆರಂಭ?

ಬೆಂಗಳೂರು: ಅಗೋಚರ ಕೊರೋನಾ ವೈರಸ್ ವಕ್ಕರಿಸಿದ್ದು, ಜನ ಕಂಗಾಲಾಗಿದ್ದಾರೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕೊರೋನಾ ಕಾರಣದಿಂದಾಗಿ ಶಿಕ್ಷಣ ಸಂಸ್ಥೆಗಳು ಸ್ತಬ್ಧವಾಗಿವೆ.

ಭಾರತದಲ್ಲೂ ಈ ವೈರಾಣು ಹಾವಳಿ ತೀವ್ರಗೊಂಡಿದೆ. ಹಾಗಾಗಿ ಎಲ್ಲಾ ರಾಜ್ಯಗಳಲ್ಲೂ ಶಾಲಾ-ಕಾಲೇಜುಗಳಲ್ಲಿ ಚಟುವಟಿಕೆಗಳು ಆರಂಭವಾಗಿಲ್ಲ. ಈ ಸಂಬಂಧ ಕೇಂದ್ರ ಸರ್ಕಾರದ ಪ್ರತಿನಿಧಿಗಳು ರಾಜ್ಯ ಸರ್ಕಾರದ ಪ್ರಮುಖರ ಜೊತೆ ನಡೆಸಿದ್ದ ವೀಡಿಯೋ ಕಾನ್ಫರೆನ್ಸ್ ಸಮಾಲೋಚನೆ ಗಮನಸೆಳೆದಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಶಾಲಾ-ಕಾಲೇಜು ಆರಂಭ ಸಾಧ್ಯವಿಲ್ಲ. ಇನ್ನೆರಡು ತಿಂಗಳು ಯಾವುದೇ ಸಾಹಸ ಬೇಡ ಎಂಬುದು ಅನೇಕರ ವಾದ. ಅದರಂತೆ ಸೆಪ್ಟೆಂಬರ್‌ವರೆಗೂ ಶಾಲೆ ಆರಂಭ ಬೇಡ ಎಂದು ಕರ್ನಾಟಕ ಸೇರಿ ಅನೇಕ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಸಲಹೆ ಮಾಡಿವೆ.

ಈ ನಡುವೆ, ಕೇರಳದಲ್ಲಿ ಸೆಪ್ಟೆಂಬರ್‌ನಲ್ಲಿ ಶಾಲೆ ಅರಂಭಕ್ಕೆ ತಯಾರಿ ನಡೆದಿದೆ. ದೆಹಲಿ, ಅಸ್ಸಾಂ ರಾಜ್ಯಗಳಲ್ಲೂ ಸೆಪ್ಟೆಂಬರ್ ತಿಂಗಳಿನಿಂದ ಶಾಲಾ ಚಟುವಟಿಕೆಗಳಿಗೆ ಮುನ್ನುಡಿ ಬರೆಯಲಾಗುತ್ತದೆ. ಆದರಂತೆ ಕರ್ನಾಟಕದಲ್ಲೂ ತಯಾರಿ ನಡೆಯುವ ಸಾಧ್ಯತೆಗಳಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ,ಈ ವಿಚಾರದಲ್ಲಿ ತ್ರಿಪುರಾ ಹಾಗೂ ಮಹಾರಾಷ್ಟ್ರ ರಾಜ್ಯಗಳು ಯಾವುದೇ ಪ್ರಸ್ತಾಪಕ್ಕೆ ಮುಂದಾಗಿಲ್ಲ.

ಈ ಮಧ್ಯೆ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಸಹಿತ ಅನೇಕ ರಾಜ್ಯಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಲೇ ಇದೆ. ಹೀಗಿರುವಾಗ ಶಾಲೆ ಆರಂಭಕ್ಕೆ ಆತುರ ಏಕೆ ಎಂಬ ಮಾತುಗಳು ಪೋಷಕರ ವಲಯದಿಂದ ಕೇಳಿ ಬರುತ್ತಿದೆ. ಹಾಗಾಗಿ ಸರ್ಕಾರಗಳು ಯಾವ ತೀರ್ಮಾನ ಕೈಗೊಳ್ಳುತ್ತದೆಂಬುದೇ ಕುತೂಹಲ.

Related posts