ದೆಹಲಿ: ಕೊರೋನಾ ವೈರಾಣು ಹಾವಳಿ ನಿಯಂತ್ರಣ ಸಂಬಂಧ ಜಾರಿಗೊಳಿಸಲಾಗಿದ್ದ ಲಾಕ್’ಡೌನ್ ನಿಯಮಗಳನ್ನು ಸಾದಿಸಲಾಗುತ್ತಿದೆ. ಇದೀಗ 4ನೇ ಅನ್ಲಾಕ್ ಪ್ರಕ್ರಿಯೆ ನಡೆದಿದ್ದು. ಸೆಪ್ಟೆಂಬರ್ 21ರಿಂದ ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳು ನಡೆಯಬಹುದು ಎಂದು ಕೇಂದ್ರ ಹೇಳಿದೆ. ಹಾಗಾಗಿ ಅಕ್ಟೊಬರ್ ತಿಂಗಳಿನಿಂದ ಶಾಲಾ-ಕಾಲೇಜುಗಳು ಆರಂಭವಾಗಬಹುದೇ ಎಂಬ ಚರ್ಚೆಗಳು ಸಾಗಿವೆ.
ಕ್ರೀಡೆ, ಮನರಂಜನೆ, ಸಾಂಸ್ಕತಿಕ, ಧಾರ್ಮಿಕ, ರಾಜಕೀಯ ಮತ್ತಿತರ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಗರಿಷ್ಠ 100 ಮಂದಿ ಪಾಲ್ಗೊಳ್ಳಲು ಅನುಮತಿ ಕೊಡಲಾಗಿದೆ.
ಈ ಕುರಿತ ಮಾರ್ಗಸೂಚಿಯ ಹೈಲೈಟ್ಸ್ ಇಲ್ಲಿದೆ:
- ಸೆಪ್ಟೆಂಬರ್ 21ರಿಂದ ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳು ನಡೆಯಬಹುದು
- ಕ್ರೀಡೆ, ಮನರಂಜನೆ, ಸಾಂಸ್ಕತಿಕ, ಧಾರ್ಮಿಕ, ರಾಜಕೀಯ ಮತ್ತಿತರ ಕಾರ್ಯಕ್ರಮಗಕ್ಕೆ ಅನುಮತಿ.
- ಸಾಮಾಜಿಕ ಅಂತರ ಕಾಯ್ದುಕೊಂಡು ಗರಿಷ್ಠ 100 ಮಂದಿ ಪಾಲ್ಗೊಳ್ಳಲು ಅನುಮತಿ
- ಸೆಪ್ಟೆಂಬರ್ 21ರಿಂದಲೇ ಬಯಲು ರಂಗಮಂದಿರಗಳನ್ನು ತೆರೆಯಲು ಅವಕಾಶ
- ಕಂಟೈನ್ಮೆಂ ಟ್ ವಲಯದ ಹೊರ ಭಾಗದಲ್ಲಿ ಸಿನಿಮಾ ಮಂದಿರಗಳು, ಈಜುಕೊಳಗಳು, ಮನರಂಜನಾ ಪಾರ್ಕ್’ಗಳಿಗೆ ಅವಕಾಶ ಇಲ್ಲ.
- ಅಂತಾರಾಜ್ಯಕ್ಕೆ ಪ್ರಯಾಣಕ್ಕೆ ಅನುಮತಿ.
- ಅಂತಾರಾಷ್ಟ್ರೀಯ ವಿಮಾನಯಾನ ಇಲ್ಲ
- ಸೆಪ್ಟೆಂಬರ್ 30ರಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಲೆಗಳು, ಕಾಲೇಜು, ಶಿಕ್ಷಣ ಸಂಸ್ಥೆಗಳು, ತರಬೇತಿ ಸಂಸ್ಥೆಗಳು ತೆರೆಯಲು ಅವಕಾಶ
- ಶಿಕ್ಷಕರು ಮತ್ತು ಶಿಕ್ಷಕೇತರ ಹಾಜರಾತಿ ಶೇಕಡ 50ಕ್ಕೆ ಮಿತಿ
- ಪಾಲಕರು ಮತ್ತು ಪೋಷಕರ ಲಿಖಿತ ಅನುಮತಿ ಮೇರೆಗೆ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಬಹುದಾಗಿದೆ
- ಕೌಶಲ್ಯ ಮತ್ತು ಉದ್ಯಮ ತರಬೇತಿಗೆ ಅನುಮತಿ
- ಸಂಶೋಧನೆ ನಡೆಸುವ ಹಾಗೂ ವೃತ್ತಿ ಶಿಕ್ಷಣ ಪಡೆಯುತ್ತಿರುವ ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಯೋಗಾಲಯಗಳಲ್ಲಿ ಕಲಿಕೆ ಮುಂದುವರೆಸಲು ಉನ್ನತ ಶಿಕ್ಷಣ ಇಲಾಖೆಯ ಅನುಮತಿ ಕಡ್ಡಾಯ