‘ವೋಟ್ ಕೊಟ್ರೆ ಮಾತ್ರ ಕೆಲಸ ಮಾಡ್ತೀವಿ ಇಲ್ಲ ಅಂದರೆ ಕೆಲಸ ಮಾಡೋದೇ ಇಲ್ಲ’

ಬೆಂಗಳೂರು: ವೋಟ್ ಕೊಟ್ರೆ ಮಾತ್ರ ಕೆಲಸ ಮಾಡ್ತೀವಿ ಇಲ್ಲ ಅಂದರೆ ಕೆಲಸ ಮಾಡೋದೇ ಇಲ್ಲ ಎಂದು ಮಾಗಡಿಯ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಅವರು ಹೇಳಿದ್ದಾರೆಂಬ ವೇಳೆ ವೀಡಿಯೋ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಇದು ಕಾಂಗ್ರೆಸ್ಸಿನ ಅಂತರಾಳದ ಧಿಮಾಕು, ದರ್ಪವನ್ನು ತೋರಿಸುತ್ತದೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

ಈ ವೀಡಿಯೋವನ್ನು ಟ್ವೀಟ್ ಮಾಡಿರುವ ಬಿಜೆಪಿ, ರಾಜ್ಯದ ಜನತೆ ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನಕೊಟ್ಟು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಪಡುತ್ತಿರುವುದು ಅಲ್ಲದೆ, ಸಿದ್ದರಾಮಯ್ಯರವರ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ‌ ಎಂದು ಬೊಟ್ಟುಮಾಡಿದೆ. ಜನರಿಗೆ ಗ್ಯಾರಂಟಿಗಳು ಸರಿಯಾಗಿ ಸಿಗುತ್ತಿಲ್ಲ, ಅಭಿವೃದ್ಧಿಯೂ ಇಲ್ಲ. ನೆಮ್ಮದಿಯ ಬದುಕು ಅಂತೂ ಇಲ್ಲವೇ ಇಲ್ಲ ಎಂದು ಬಿಜೆಪಿ ಹೇಳಿದೆ.

ಇದೇ ವೇಳೆ, ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿಯನ್ನು ನೆಟ್ಟಿಗರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಜೆಪಿಯ ಯೋಗ್ಯತೆ ಬಗ್ಗೆಯೂ ಪ್ರಶ್ನಿಸಿದ್ದಾರೆ. ‘ನಿಮಗೆ ಯೊಗ್ಯತೆ ಇದ್ದರೆ ಇದರ ಬಗ್ಗೆ ಕಾನೂನಿನ ಪ್ರಕಾರ ಹೊರಾಟ ಮಾಡಿ ಕೊರ್ಟಿಗೆ ಹೊಗಿ election commissionಗೆ ದೂರು ಕೊಡಿ. ಬರೀ ಉತ್ತರ ಕುಮಾರರ ತರಹ ಟ್ವೀಟ್ ಮಾಡಿದರೆ ಏನು ಪ್ರಯೊಜನ,?’ ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಕೆಲವರು ಬೆಜೆಪಿ ಟ್ವೂಟ್‌ಗೆ ಧ್ವನಿಗೂಡಿಸಿದ್ದಾರೆ, ಮಾಗಡಿ ಬಾಲಕೃಷ್ಣ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಬಾಲಕೃಷ್ಣ ಅವರು ಮಾಗಡಿ ಅಭಿವೃದ್ಧಿಗೆ ಶ್ರಮಿಸಿಲ್ಲ ಎಂಬ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. 

 

Related posts