ದೆಹಲಿ: ಕೆಂಪು ನಾಡು ಚೀನಾದಲ್ಲಿ ಹುಟ್ಟಿ, ಜಗತ್ತಿನಾದ್ಯಂತ ಕರಾಳ ಬಾಹುವನ್ನು ಚಾಚುತ್ತಿರುವ ಕರೋನಾ ವೈರಸ್ ಈವರೆಗೆ 15,000 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
ಕೊರೋನಾ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚುತಲಿದ್ದು, ಚೀನಾ ಮಾತ್ರವಲ್ಲ ಅಮೆರಿಕಾ, ಇಟೆಲಿ, ಇರಾನ್, ಸ್ಪೇನ್ ಸಹಿತ ಏಷ್ಯಾ ಹಾಗೂ ಐರೋಪ್ಯ ರಾಷ್ಟ್ರಗಳಲ್ಲಿ ತಲ್ಲಣ ಸೃಷ್ಟಿಯಾಗಿದೆ.
ಣಕ್ಷಣವೂ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಇಟಲಿಯನ್ನು ಸ್ಮಶಾನವನ್ನಾಗಿಸಿದೆ. ಕೊಲ್ಲಿ ರಾಷ್ಟ್ರಗಳಲ್ಲೂ ಕೊರೋನಾ ಸೋಂಕು ತೀವ್ರಗತಿಯಲ್ಲಿ ವಿಸ್ತಾರವಾಗುತ್ತಿದೆ.
ಈ ನಡುವೆ ವಿಶ್ವವ್ಯಾಪಿ ಕೊರೋನಾ ವೈರಸ್’ಗೆ ಬಲಿಯಾದವರ ಸಂಖ್ಯೆ 15,000 ದಾಟಿದೆ. ಸುಮಾರು 3,75,000 ಮಂದಿ ವಿವಿಧ ದೇಶಗಳಲ್ಲಿ ಕೊರೋನಾ ಸೋಂಕಿನಿಂದಾಗಿ ಆಸ್ಪತ್ರೆಪಾಲಾಗಿದ್ದಾರೆಂದು ಹೇಳಲಾಗುತ್ತಿದೆ.
ಕೊರೋನಾಕ್ಕೆ ಬಲಿಯಾದವರಲ್ಲಿ ಬಹುಪಾಲು ಮಂದಿ ಐರೋಪ್ಯ ರಾಷ್ಟ್ರದವರು. ಇಟಲಿಯಲ್ಲಿ 5,47೦ ಮಂದಿ ಸಾವನ್ನಪ್ಪಿದ್ದು, ಚೀನಾದಲ್ಲಿ 3,270 ಹಾಗೂ ಸ್ಪೇನ್ ನಲ್ಲಿ 2,182 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆಂದು ವರದಿಗಳು ಹೇಳಿವೆ