ಕರೋನಾ ತಲ್ಲಣ.. ಇಡೀ ಕರುನಾಡು ದಿಗ್ಬಂಧನ..

ಬೆಂಗಳೂರು: ಕರೋನಾ ವೈರಸ್ ತಲ್ಲಣದಿಂದಾಗಿ ಇಡೀ ಕರುನಾಡು ದಿಗ್ಬಂಧನಕ್ಕೊಳಗಾಗಿದೆ. ಭೀತಿಯ ತರಂಗ ಎಬ್ಬಿಸಿರುವ ಮಾರಣಾತಿಕ ಕರೋನಾ ವೈರಸ್’ನಿಂದಾಗಿ ಇಡೀ ರಾಜ್ಯ ನಿರಂತರ ಕಾರ್ಫ್ಯುವಿನ ಸನಿವೇಶವನ್ನು ಎದುರಿಸುವಂತಾಗಿದೆ.

ಕಳೆದ ಭಾನುವಾರ ಜನತಾ ಕಾರ್ಫ್ಯೂ ನಿಂದಾಗಿ ಇಡೀ ರಾಜ್ಯ ಮೌನಕ್ಕೆ ಶರಣಾಗಿತ್ತು. ಇದೀಗ ಈ ತಿಂಗಳಾಂತ್ಯದವರೆಗೂ ಕರ್ನಾಟಕ ಸಂಪೂರ್ಣ ಲಾಕ್ ಡೌನ್ ಪರಿಸ್ಥಿತಿಗೆ ಸಿಲುಕಿದೆ. ಬೆಳ್ಳಂಬೆಳಗ್ಗೆ ಸಂತೆ ನಡೆದಿರುವುದನ್ನು ಬಿಟ್ಟರೆ ಇನ್ನುಳಿದಂತೆ ಎಲ್ಲೆಡೆ ಬಂದ್ ಸನ್ನಿವೇಶ ಕಂಡುಬಂದಿದೆ.

ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ಸುಗಳು ರಸ್ತೆಗಿಳಿಯಲಿಲ್ಲ, ಮೆಟ್ರೋ ರೈಲುಗಳೂ ಸಂಚಾರ ಆರಂಭಿಸಿಲ್ಲ. ಓಲಾ-ಉಬರ್ ಸಹಿತ ಟ್ಯಾಕ್ಸಿ ಸೇವೆಗಳೂ ಸಿಗದಿರುವುದರಿಂದ ಜನ ಸಂಚಾರಕ್ಕೂ ಬ್ರೇಕ್ ಬಿದ್ದಿದೆ.
ಮಾರ್ಚ್ 31ರವರೆಗೂ ಕರ್ನಾಟಕವನ್ನು ಲಾಕ್ ಡೌನ್ ಆದೇಶ ಹೊರ ಬಿದ್ದಿರುವುದರಿಂದಾಗಿ ಜನರು ಕಠಿಣ ಪರಿಸ್ಥಿತಿಯನ್ನು ಎದುರಿಸಲೇಬೇಕಿದೆ.

     ಏನಿದೆ? ಏನಿಲ್ಲ?

 • ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ, ಖಾಸಗಿ ಬಸ್ ಸೇವೆ ಸ್ಥಗಿತ
 • ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸೇವೆ ಸಿಗಲ್ಲ.
 • ಆಟೋ, ಓಲಾ ಕ್ಯಾಬ್, ಟ್ಯಾಕ್ಸಿ ಸೇವೆ ಅಲಭ್ಯ.
 • ಬಾರ್ ಅಂಡ್ ರೆಸ್ಟೋರೆಂಟ್, ಮದ್ಯದಂಗಡಿಗಳು ಬಂದ್.
 • ದೇವಸ್ಥಾನಗಳು, ಧಾರ್ಮಿಕ ಆಚರಣೆಗಳು, ಜಾತ್ರಾ ಮಹೋತ್ಸವಗಳು ನಿಷಿದ್ಧ.
 • ಸಾರ್ವಜನಿಕ ಸಭೆ ಸಮಾರಂಭಗಳಿಗೆ ನಿರ್ಬಂಧ.
 • ಶಾಲೆ-ಕಾಲೇಜು-ಪರೀಕ್ಷೆ ಹೆಸರಲ್ಲಿ ಕೋಚಿಂಗ್ ಕ್ಲಾಸುಗಳನ್ನೂ ನಡೆಸುವಂತಿಲ್ಲ.
 • ಪಡಿತರ ಅಂಗಡಿ, ದಿನಸಿ, ಹಾಲು, ತರಕಾರಿ ವ್ಯಾಪಾರಕ್ಕೆ ಅಡ್ಡಿಯಿಲ್ಲ.
 • ಪೆಟ್ರೋಲ್ ಬಂಕ್, ಎಲ್ ಪಿಜಿ ಗ್ಯಾಸ್ ವಿತರಣೆ ಅಬಾಧಿತ.
 • ಆಸ್ಪತ್ರೆ, ಮೆಡಿಕಲ್ ಶಾಪ್ ಗಳು ಎಂದಿನಂತೆ ಇರುತ್ತೆ.
 • ಬ್ಯಾಂಕ್, ಎಟಿಎಂ ಮತ್ತು ಇಂಟರ್ ನೆಟ್ ಸೇವೆಗಿಲ್ಲ ಅಂಕುಶ.

Related posts