ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಅವರ ವೀಡಿಯೋವೊಂದು ವೈರಲ್ ಆಗಿದ್ದು, ಈ ಬಗ್ಗೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಈ ವೀಡಿಯೋ ವಿವಾದವನ್ನು ಮುಂದಿಟ್ಟು ಪ್ರತಿಪಕ್ಷಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಮುಗಿಬಿದ್ದಿವೆ. ಈ ವೀಡಿಯೋ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರೆ, ಬಿಜೆಪಿ ಪಕ್ಷವು ‘ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇದೆ’ ಎಂದು ವ್ಯಂಗ್ಯವಾಡಿದೆ. ಇದೇ ವೇಳೆ, ಯತೀಂದ್ರ ಅವರನ್ನು ‘ಶ್ಯಾಡೋ ಸಿಎಂ’ ಎಂದು ಬಣ್ಣಿಸಿದೆ.
ಹಲೋ ಅಪ್ಪಾ…!#ShadowCM#CongressFailsKarnataka pic.twitter.com/oBzfDbJ6tD
— BJP Karnataka (@BJP4Karnataka) November 16, 2023
ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿಎಂ ಗಿಂತಲೂ ಪವರ್ ಫುಲ್ ಈ ಶ್ಯಾಡೋ ಸಿಎಂ..!’ ಎಂದು ಹೇಳಿದೆ. ‘ಅಪ್ಪ ನಾನು ಕೊಟ್ಟಿರೋದನ್ನು ಮಾತ್ರ ಮಾಡಬೇಕು ಅದಕ್ಕಿಂತ ಹೆಚ್ಚು ಮಾಡುವಂತಿಲ್ಲ ಎನ್ನುವ ಕಟ್ಟಾಜ್ಞೆಯನ್ನು ಮಾಜಿ ಶಾಸಕ ಡಾ.ಯತೀಂದ್ರ ಅವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ನಾಮಕಾವಸ್ಥೆ ಮಾತ್ರ ಅಧಿಕಾರ ಆಡಳಿತ ಎಲ್ಲವೂ ಪುತ್ರ ಯತೀಂದ್ರ ಅವರದ್ದು ಎನ್ನುವುದಕ್ಕೆ ಇದಕ್ಕಿಂತಲೂ ಉದಾಹರಣೆ ಸಿಗಲು ಸಾಧ್ಯವೇ ಇಲ್ಲ’ ಎಂದು ಹೇಳಿದೆ. ಅಷ್ಟೇ ಅಲ್ಲ, ‘ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇದೆ..!’ ಎಂದು ಬಿಜೆಪಿ ವ್ಯಾಖ್ಯಾನಿಸಿದೆ.
ಸಿಎಂ ಗಿಂತಲೂ ಪವರ್ ಫುಲ್ ಈ ಶ್ಯಾಡೋ ಸಿಎಂ..!
ಅಪ್ಪ ನಾನು ಕೊಟ್ಟಿರೋದನ್ನು ಮಾತ್ರ ಮಾಡಬೇಕು ಅದಕ್ಕಿಂತ ಹೆಚ್ಚು ಮಾಡುವಂತಿಲ್ಲ ಎನ್ನುವ ಕಟ್ಟಾಜ್ಞೆಯನ್ನು ಮಾಜಿ ಶಾಸಕ @Dr_Yathindra_S ಅವರು ರಾಜ್ಯದ ಮುಖ್ಯಮಂತ್ರಿ @siddaramaiah ಅವರಿಗೆ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ನಾಮಕಾವಸ್ಥೆ ಮಾತ್ರ ಅಧಿಕಾರ ಆಡಳಿತ ಎಲ್ಲವೂ… pic.twitter.com/QfRfkJFHkK
— BJP Karnataka (@BJP4Karnataka) November 16, 2023