ಚೀನಾ ವಿರುದ್ಧ ತೊಡೆ ತಟ್ಟಿದ ಭಾರತ, ಅಮೇರಿಕ; ಡ್ರ್ಯಾಗನ್ ರಾಷ್ಟ್ರ ಕಂಗಾಲು

ದೆಹಲಿ: ಕೊರೋನಾ ವೈರಾಣು ಅಬ್ಬರಕ್ಕೆ ಇಡೀ ಜಗತ್ತೇ ಹೈರಾಣಾಗಿದೆ. ಅದರಲ್ಲೂ ವಿಶ್ವದ ಹಿರಿಯಣ್ಣನೆಂದು ಬೀಗುತ್ತಿದ್ದ ಅಮೇರಿಕಾಗೆ ಕೊರೋನಾ ಮರ್ಮಾಘಾತ ನೀಡಿದೆ. ಚೀನಾದಲ್ಲಿ ಹುಟ್ಟಿ ಜಗತ್ತಿನಾದ್ಯಂತ ತನ್ನ ಬಾಹುವನ್ನು ಚಾಚಿರುವ ಈ ವೈರಾಣು ಸಂಚಿನ ಹಿಂದೆ ಕೆಂಪು ನಾಡಿನ ಪಿತೂರಿ ಇದೆ ಎಂದು ಆರೋಪಿಸುತ್ತಿರುವ ಅಮೆರಿಕಾ ಇದೀಗ ಡ್ರಾಗನ್ ನಾಡಿಗೆ ಒಂದೊಂದೇ ಹೊಡೆತ ನೀಡುತ್ತಿದೆ.

  • ಕೆಲ ಸಮಯದ ಹಿಂದೆ ಚಿನಾ ವಿರುದ್ದ ಅಮೆರಿಕಾದಿಂದ ಧಾವೆ
  • ಅನಂತರ ಚೀನೀಯರ ಪ್ರಭಾವದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಹಣಕಾಸು ನೆರವು ರದ್ದು
  • ಇದೀಗ ಚೀನಾ ವಿರುದ್ದ ಕೇಸ್ ದಾಖಲಿಸಲು ಅಮರಿಕನ್ನರಿಗೆ ಅವಕಾಶ ನೀಡುವ ಮಸೂದೆ

ಅಮೆರಿಕಾ ವಿರುದ್ಧ ಮುಸುಕಿನ ಗುದ್ದಾಟ ನಡೆಸುತ್ತ ತನ್ನ ಎದುರಾಳಿ ರಾಷ್ಟ್ರಗನೂ ಕೆಣಕುತ್ತಿರುವ ಚೀನಾ ವಿರುದ್ಧ ಇದು ಟ್ರಂಪ್ ಅವರ ಹೊಸ ಅಸ್ತ್ರ. ಚೀನಾ ವಿರುದ್ದ ಕೇಸ್ ದಾಖಲಿಸಲು ಅಮರಿಕನ್ನರಿಗೆ ಅವಕಾಶ ನೀಡುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ.
ವಿಶ್ವಕ್ಕೆ ಕೊರೋನಾ ಹಬ್ಬಿಸಿರುವ ಆರೋಪ ಹೊತ್ತಿರುವ ಚೀನಾ ವಿರುದ್ದ ಕೇಸು ದಾಖಲಿಸಲು ಅಮೇರಿಕನ್ನರಿಗೆ ಅವಕಾಶ ನೀಡುವ ಸಲುವಾಗಿ ಹೊಸ ಕಾನೂನು ಜಾರಿಗೆ ತರುವ ಪ್ರಕ್ರಿಯೆ ಇದಾಗಿದೆ. ಒಂದು ವೇಳೆ ಇದು ಅಮೇರಿಕಾದಲ್ಲಿ ಕಾನೂನಾಗಿ ಮಾರ್ಪಟ್ಟರೆ ಚೀನಾ ದೇಶ ಭಾರೀ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳೇ ಹೆಚ್ಚು. ಈ ಬೆಳವಣಿಗೆಯನ್ನಾಧರಿಸಿ ಜಗತ್ತಿನ ಮತ್ತಷ್ಟು ರಾಷ್ಟ್ರಗಳು ಇದೇ ರೀತಿ ಕಾನೂನು ಜಾರಿಗೊಳಿಸಿದರೆ ವಿಶ್ವ ಸಮುದಾಯದ ಎದುರು ಚೀನಾ ಒಬ್ಬಂಟಿಯಾಗುವ ಸಾಧ್ಯತೆಗಳನ್ನೂ ಹಾಕುವಂತಿಲ್ಲ. ಅಮೆರಿಕಾದ ಈ ನಡೆ ಚೀನಾ ವಿರುದ್ದದ ಸಮರ ತಂತ್ರ ಅನ್ನುವುದನ್ನು ಅಲ್ಲಗಳೆಯಲಾಗದು.

ಚೀನಾಕ್ಕೆ ಭಾರತ ಭರ್ಜರಿ ಹೊಡೆತ

ಇನ್ನೊಂದೆಡೆ, ಅಮೇರಿಕ ಜೊತೆ ನಿಂತು ತೊಡೆ ತಟ್ಟಿರುವ ಭಾರತ ಕೂಡಾ ಚೀನಾಕ್ಕೆ ಭರ್ಜರಿ ಹೊಡೆತ ನೀಡಲು ಸಜ್ಜಾಗಿದೆ.
ಕೊರೋನಾ ಮೂಲಕ ಎಲ್ಲಾ ದೇಶಗಳನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿರುವ ಚೀನಾ ನಷ್ಟದಲ್ಲಿರುವ ಕಂಪೆನಿಗಳನ್ನು ತನ್ನ ಆರ್ಥಿಕ ಸ್ವಾಧೀನಕ್ಕೆ ತೆಗೆದುಕೊಳ್ಳುವ ಕುತಂತ್ತಕ್ಕಿಳಿದಿದೆ. ಭಾರತದ ಪ್ರತಿಷ್ಠಿತ ಬ್ಯಾಕುಗಳಲ್ಲೊಂದಾದ HDFCಯ ಬಹುಪಾಲು ಶೇರುಗಳನ್ನು ಖರೀದಿಸಿದ ಚೀನಾ ವೈಖರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹಾಗಾಗಿ ಇನ್ನು ಮುಂದೆ ಚೀನಾದ ಇಂತಹಾ ದುಸ್ಸಾಹಾಕ್ಕೆ ಅವಕಾಶ ಸಿಗಬಾರದೆಂಬ ನಿಟ್ಟಿನಲ್ಲಿ ಮೋದಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ವಿದೇಶೀ ನೇರ ಬಂಡವಾಳ ನಿಯಮಗಳಿಗೆ ತಿದ್ದುಪಡಿ ತಂದಿರುವ ಸರ್ಕಾರ, ಭಾರತದ ಗಡಿಗೆ ಹೊಂದಿಕೊಂಡಿರುವ ರಾಷ್ಟ್ರಗಳು ಭಾರತಲ್ಲಿ ಇಲ್ಲಿನ ಸರ್ಕಾರದ ಒಪ್ಪಿಗೆ ಪಡೆದೇ ಹೂಡಿಕೆ ಮಾಡಬೇಕೆಂಬ ನಿಯಮವನ್ನು ಜಾರಿಗೆ ತಂದಿದೆ.

ಇದನ್ನೂ ಓದಿ.. ಜನರ ಸಿಟ್ಟಿಗೆ ಬೆಚ್ಚಿದ ಬಿಎಸ್’ವೈ; ಎಲ್ಲವೂ ಕ್ಯಾನ್ಸಲ್

 

Related posts