ಕಿಲ್ಲರ್ ಕೊರೋನಾಗೆ ಭಾರತ ತತ್ತರ;  15000 ದಾಟಿದ ಸೋಂಕಿತರ ಸಂಖ್ಯೆ

ದೆಹಲಿ: ಜಗತ್ತನ್ನೇ ನಡುಗಿಸಿರುವ ಅಗೋಚರ ಕಿಲ್ಲರ್ ಕೊರೋನಾ ಭಾರತದಲ್ಲೂ ಅಟ್ಟಹಾಸ ಮೆರೆಯುತ್ತಿದೆ. ಲಾಕ್’ಡೌನ್ ಜಾರಿಯಲ್ಲಿದ್ದರೂ ಸೋಂಕಿನ ಸಂಖ್ಯೆ ಹೆಚ್ಚುತ್ತಲೇ ಇವೆ. ಯಮಧೂತ ಕೋವಿಡ್-19 ಸೋಂಕಿಗೆ ಬಲಿಯಾಗುತ್ತಿರುವ ಸನ್ನಿವೇಶವೂ ಕರಾಳತೆಗೆ ಉದಾಹರಣೆಯಾಗುತ್ತಿದೆ.

ಕಳೆದೆರಡು ದಿನಗಳಲ್ಲಿ ಸುಮಾರು 50 ಮಂದಿ ಕೊರೋನಾ ಸೋಂಕಿತರು ಸಾವನ್ನಪಿದ್ದಾರೆ.

  • ಒಂದೇ ದಿನದಲ್ಲಿ 1144 ಹೊಸ ಕೊರೋನಾ ಕೇಸ್
  • ಒಟ್ಟು ಸೋಂಕಿತರ ಸಂಖ್ಯೆ ಸುಮಾರು 15,000 
  • ಈ ವರೆಗೂ 520ಕ್ಕೂ ಹೆಚ್ಚು ಮಂದಿ ಸಾವು
  • ಮಹಾರಾಷ್ಟ್ರ ರಾಜ್ಯದಲ್ಲೇ 328ಹೊಸ ಕೇಸ್
  • ಮೋದಿ ತವರಲ್ಲಿ 280 ಹೊಸ ಕೇಸ್ 

ಇದನ್ನೂ ಓದಿ.. ಜನರ ಸಿಟ್ಟಿಗೆ ಬೆಚ್ಚಿದ ಬಿಎಸ್’ವೈ; ಎಲ್ಲವೂ ಕ್ಯಾನ್ಸಲ್

ಏಪ್ರಿಲ್ 20ರ ವೇಳೆಗೆ ಕೊರೋನಾ ಸೋಂಕಿನ ಸಂಖ್ಯೆಯಲ್ಲಿ ಇಳಿಮುಖವಾಗಬಹುದೆಂದು ನಿರೀಕ್ಷಿಸಲಾಗುತ್ತಿತ್ತು. ಆದರೆ ಪರಿಸ್ಥಿಯ ವೈಚಿತ್ರ್ಯವೇ ಬೇರೆ. ಈಗಿನ್ನೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಶನಿವಾರ ಒಂದೇ ದಿನ ದೇಶದಾದ್ಯಂತ 1144 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ಈಗ ಸುಮಾರು 15000.

ಮಹಾರಾಷ್ಟ್ರ ರಾಜ್ಯವೊಂದರಲ್ಲೇ  328 ಹೊಸ ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ. ಮೋದಿ ತವರು ಗುಜರಾತ್ ರಾಜ್ಯದಲ್ಲೂ ಹೊಸದಾಗಿ 280 ಸೋಂಕಿನ ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆ ಅಂಕಿಅಂಶ ಹೇಳುತ್ತಿದೆ.

ಅಷ್ಟೇ ಅಲ್ಲ, ದೇಶದಲ್ಲಿ ಮತ್ತೆ 39 ಮಂದಿ ಸಾವನ್ನಪ್ಪುವ ಮೂಲಕ ಕಿಲ್ಲರ್ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 520 ದಾಟಿದೆ.  ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 15,000ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 521ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ.. ‘ಅಮ್ಮಾ ಅಮ್ಮಾ ಓ ಎನ್ನಮ್ಮಾ’.. ಮೋದಿ ಹಾಡು

Related posts