ಬಿಜೆಪಿ ಕಾರ್ಯಕರ್ತರ ಬೆಂಬಲಕ್ಕೆ ನಿಂತ ಶಾಸಕ; ಸರ್ಕಾರದ ವಿರುದ್ಧವೇ ಸಿಡಿದೆದ್ದ ಸಚಿವ, ಬೆಂಬಲಿಗರು

ಕೊರೋನಾ ಕಾಲದಲ್ಲಿ ರಾಜ್ಯ ಸರ್ಕಾರದ ನಿಲುವುಗಳ ಬಗ್ಗೆ ಬಿಜೆಪಿ ಕಾರ್ಯಕರ್ತರೇ ಆಕ್ರೋಶ ಹೊರಹಾಕಿದ್ದಾರೆ. ಅದರಲ್ಲೂ ಸಚಿವ ಸಿ.ಟಿ.ರವಿ ಅವರ ಟ್ವೀಟ್ ರಾಜ್ಯ ಕಮಲಾ ಪಾಳಯದಲ್ಲಿ ಸಂಚಲನ ಸೃಷ್ಟಿಸಿದೆ.

ಬೆಂಗಳೂರು: ಕೊರೋನಾ ವಿಚಾರ ಇದೀಗ ಪರಿಸ್ಥಿತಿಗೆ ಸವಾಲು ಎಂಬಂತಾಗಿದೆ. ಸೋಂಕು ತಡೆಗಟ್ಟಲು ಬಗೆಬಗೆಯ ಹಾದಿಯನ್ನು ಸರ್ಕಾರ ಹುಡುಕಾಡುತ್ತಿದ್ದರೆ ಮತ್ತೊಂದೆಡೆ ತಬ್ಲೀಗಿಗಳ ವಿಚಾರ ಮುಂದಿಟ್ಟು ಕೆಲವೆಡೆ ನಡೆದಿರುವ ಪ್ರಸಂಗಗಳ ಬಗ್ಗೆ ಸಿಎಂ ನೀಡಿರುವ ಹೇಳಿಕೆ ಪರ ವಿರೋಧ ಚರ್ಚೆಗೂ ಎಡೆಮಾಡಿಕೊಟ್ಟಿದೆ.

ಈ ಮಧ್ಯೆ ರಾಜ್ಯದ ಹಲವೆಡೆ ಪೊಲೀಸರ ಕ್ರಮದ ವಿರುದ್ಧ ಸಂಘ ಪರಿವಾರದ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಕಳೆದ ಭಾನುವಾರ ಬೆಂಗಳೂರಿನ ಡಿ.ಜೆ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೋದಿ ಕರೆಯನ್ನು ಬೆಂಬಲಿಸಿ ದೀಪ ಹಚ್ಚುವಂತೆ ಒತ್ತಾಯಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ಇನ್ನೊಂದೆಡೆ ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಪೌರತ್ವ ವಿರೋಧಿ ಹೋರಾಟ ಮೂಲಕ ಸರ್ಕಾರದ ವಿರುದ್ಧ ಕೆಲಸ ಮಾಡುತ್ತಿದ್ದ ಯುವಕನಿಗೆ ಲಾಕ್ ಡೌನ್ ವೇಳೆ ಡ್ರೋನ್ ಚಿತ್ರೀಕರಣಕ್ಕೆ ಪೊಲೀಸರು ಅನುಮತಿ ನೀಡಿದ್ದಾರೆಂದು ಬಿಜೆಪಿ ಬೆಂಬಲಿಗರು ಸಿಟ್ಟು ಹೊರಹಾಕಿದ್ದಾರೆ. ಈ ವಿಚಾರದಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿರುವ ಬಿಜೆಪಿ ಶಾಸಕ ರಾಜೇಶ್ ನಾಯ್ಕ್, ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಪೊಲೀಸ್ ವರಿಷ್ಠರಿಗೆ ತಾಕೀತು ಮಾಡಿದ್ದಾರೆ.

ಸರ್ಕಾರದ ವಿರುದ್ಧ ಸೀಟಿ ಊದಿದ ರವಿ ಬೆಂಬಲಿಗರು:

ಈ ನಡುವೆ ಬೇಲೂರು ಪ್ರಕರಣದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಸರ್ಕಾರದ ವಿರುದ್ಧವೇ ಗರಂ ಆಗಿದ್ದಾರೆ.

ಕೊರೋನಾ ವಿಚಾರದಲ್ಲಿ ತಬ್ಲೀಘಿಗಳ ಬಗ್ಗೆ ಪೋಸ್ಟ್ ಹಾಕಿದ ಬಿಜೆಪಿ ಕಾರ್ಯಕರ್ತನ ವಿರುದ್ಧ ಕೇಸ್ ಹಾಕಿರುವ ಪೊಲೀಸರ ಕ್ರಮಕ್ಕೆ ಸಚಿವರು ಹಾಗೂ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಬ್ಲೀಘಿಜಮಾತ್ ವಿರುದ್ಧ ಪೋಸ್ಟ್ ಹಾಕಿದರೆ ತಪ್ಪೇನು ಎಂದು ಸಿ.ಟಿ.ರವಿ ಗೃಹ ಇಲಾಖೆಯನ್ನು ಪ್ರಶ್ನಿಸಿದ್ದಾರೆ. ಅತಿರೇಕದ ವರ್ತನೆ ತೋರಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಎಸ್.ಆರ್.ಬೊಮ್ಮಾಯಿ ಅವರನ್ನು ಒತ್ತಾಯಿಉಸಿದ್ದಾರೆ. ಈ ಬಗ್ಗೆ ಸಚಿವ ಸಿ.ಟಿ.ರವಿ ಟ್ವೀಟ್ ಮಾಡಿದ್ದು, ಈ ಟ್ವೀಟ್ ಗೆ ಕಾಮೆಂಟ್ ಮಾಡಿರುವ ನೂರಾರು ಮಂದಿ ರಾಜ್ಯ ಸರಕಾರ, ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ.. ಮತ್ತೊಂದು ಸರ್ಜಿಕಲ್ ಸ್ಟ್ರೈಕ್; ಯುದ್ಧ ಸನ್ನದ್ಧ ಪಾಕ್ ನೆಲದ ಮೇಲೆ ಸದ್ದಿಲ್ಲದೇ ದಾಳಿ; ಭಾರತೀಯ ಸೇನೆಗೆ ಸಲಾಂ 

 

Related posts