ಮತ್ತೊಂದು ಸರ್ಜಿಕಲ್ ಸ್ಟ್ರೈಕ್; ಯುದ್ಧ ಸನ್ನದ್ಧ ಪಾಕ್ ನೆಲದ ಮೇಲೆ ಸದ್ದಿಲ್ಲದೇ ದಾಳಿ; ಸೇನೆಗೆ ಸಲಾಂ

ನರಿ ಬುದ್ದಿ ತೋರುತ್ತಿರುವ ಪಾಕಿಸ್ತಾನಕ್ಕೆ ಭಾರತ ಮತ್ತೊಮ್ಮೆ ಶಾಕ್ ನೀಡಿದೆ. ಗಡಿಯಾಚೆಗೆ ಪಾಕ್ ಸೇನೆಯ ಹಿಡಿತದಲ್ಲಿರುವ ನೆಲದ ಮೇಲೆಯೇ ಭಾರತೀಯ ಸೇನೆ ಲಗ್ಗೆ ಹಾಕಿ ಉಗ್ರರ ಸಾಮ್ರಾಜ್ಯವನ್ನು ಧ್ವಂಸಗೊಳಿಸಿದೆ.

ದೆಹಲಿ: ಒಂದೆಡೆ ಕೊರೋನಾ ಹಾವಳಿ ನಿಯಂತ್ರಿಸಲು ಜಗತ್ತೇ ಪರದಾಡುತ್ತಿದ್ದರೆ ಇದೇ ದುಸ್ಥಿತಿಯ ಸಂದರ್ಭವನ್ನು ಬಳಸಿ ಪಾಕಿಸ್ತಾನವು ತನ್ನ ನರಿ ಬುದ್ದಿಯನ್ನು ಪ್ರದರ್ಶಿಸುತ್ತಿದೆ. ಭಾರತದ ಮೇಲೆ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿರುವ ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿದಿರುವ ಭಾರತೀಯ ಸೇನೆ ಇದೀಗ ಪಾಕ್ ನೆಲದ ಮೇಲೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿದೆ.

ಜಮ್ಮು ಕಾಶ್ಮೀರದಲ್ಲಿ ಕೆಲ ದಿನಗಳಿಂದೀಚೆಗೆ ಉಗ್ರರ ಉಪಟಳ ಹೆಚ್ಚಾಗಿದೆ. ಹಾಗಾಗಿ ಕಣಿವೆ ರಾಜ್ಯದ ಗಡಿ ಭಾಗದಲ್ಲಿ ಸೇನಾಪಡೆಯು ಉಗ್ರರ ವಿರುದ್ಧ “ರಂಡೋರಿ ಬೆಹಕ್‌’ ಎಂಬ ಕಾರ್ಯಚರಣೆ ಕೈಗೊಂಡಿದೆ. ಐವರು ಕಮಾಂಡೋಗಳನ್ನು ಬಲಿ ಪಡೆದಿರುವ ಪಾಕ್ ಉಗ್ರರ ಧಮನ ಕಾರ್ಯದಲ್ಲಿ ತೊಡಗಿರುವ ಭಾರತೀಯ ಸೇನೆ, ಪಾಕಿಸ್ತಾನ ಹಿಡಿತದಲ್ಲಿರುವ ನೆಲದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಇಮ್ರಾನ್ ಖಾನ್ ಆಡಳಿತಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಗಡಿ ನಿಯಂತ್ರಣ ರೇಖೆಗೆ ಸಮೀಪದಲ್ಲಿರುವ ಪಾಕ್ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿ ಅಡಗುದಾಣಗಳನ್ನು ಧ್ವಂಸಗೊಳಿಸಿದೆ.

ಸಿನಿಮೀಯ ಮಾದರಿ ದಾಳಿ

ಭಾರತೀಯ ಕಮಾಂಡೋಗಳ ಹತ್ಯೆಗೆ ಭಾರತೀಯ ಸೇನೆ ಪ್ರತೀಕಾರ ನೀಡುತ್ತದೆ ಎಂಬುದು ಪಾಕಿಸ್ಥಾನಕ್ಕೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಪಾಕ್ ಸೇನೆಯು ಗಡಿಯಲ್ಲಿ ಪಹರೆಯನ್ನು ಬಿಗಿಗೊಳಿಸಿತ್ತು. ಈ ನಡುವೆ, ಶುಕ್ರವಾರ ರಾತ್ರಿ ನಂತರ ಚೆಕ್‌ಪೋಸ್ಟ್‌ಗಳತ್ತ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿತ್ತು. ಇದಕ್ಕೆ ತಿರುಗೇಟು ಎಂಬಂತೆ ಭಾರತದ ವಾಯುಸೇನೆ ಪಾಕಿಸ್ತಾನ ಸೇನೆಯ ಹಿಡಿತದಲ್ಲಿರುವ ಪ್ರದೇಶದಲ್ಲಿದ್ದ ಉಗ್ರರ ನೆಲೆಯನ್ನು ಹುಡುಕಿ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ.

ಸದ್ದಿಲ್ಲದೇ ನಡೆದ ಈ ಸರ್ಜಿಕಲ್ ಸ್ಟ್ರೈಕ್’ನಲ್ಲಿ ಉಗ್ರರ ಅಡಗುತಾಣಗಳು ದ್ವಾಂಸವಾಗಿದ್ದು, ಅನೇಕ ಮಂದಿ ದಿಕ್ಕಾಪಾಲಾಗಿ ಓಡಿದ್ದಾರೆ. ಉಗ್ರರ ಅಡಗುದಾಣಗಳು ಮತ್ತು ಲಾಂಚ್‌ಪ್ಯಾಡ್‌ಗಳು ಧ್ವಂಸವಾಗಿದ್ದು, ಭಾರತದ ಮೇಲೆ ದಾಳಿಗೆ ನಡೆದಿರುವ ಸಂಚನ್ನು ಸಂಪೂರ್ಣವಾಗಿ ವಿಫಲಗೊಳಿಸಲಾಗಿದೆ. ಮದ್ದು ಗುಂಡುಗಳ ಸಂಗ್ರಹಾಗಾರಗಳನ್ನೂ ನಾಶಪಡಿಸಿದೆ.

ಈ ಮಧ್ಯೆ, ಕುಪ್ವಾರ ಜಿಲ್ಲೆಯ ಟಾಂಗ್ದಾರ್ ಮತ್ತು ಕರ್ನಾಹ್ ಸೆಕ್ಟರ್ ನಲ್ಲಿ ಭಾನುವಾರ ಪಾಕ್ ಸೇನೆ ಭಾರೀ ಪ್ರಮಾಣದ ಗುಂಡಿನ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ. ಭಾರತೀಯ ಸೇನಾ ಪಡೆ ಕೂಡ ಪ್ರತಿದಾಳಿ ಮೂಲಕ ತಕ್ಕ ಉತ್ತರ ನೀಡಿದೆ. ವರದಿಯ ಪ್ರಕಾರ, ಪಾಕ್ ಸೇನೆ ಷಾರಾರಾತ್, ಜಲ್, ಬ್ಲ್ಯಾಕ್ ರಾಕ್ ಮತ್ತು ಅನಿಲ್ ಪೋಸ್ಟ್ ಅನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದೆ ಎನ್ನಲಾಗುತ್ತಿದೆ.

ಈ ನಡುವೆ, ಭಾರತ ಮತ್ತು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯ ಖೇರನ್ ಸೆಕ್ಟರ್ ನ ದೂಧ್ ನಿಯಾಲ್ ಬಳಿ ಭಾರತೀಯ ಭದ್ರತಾ ಪಡೆಗಳು ಉಗ್ರರು ಹಾಗೂ ಪಾಕ್ ನೆಲದಲ್ಲಿನ ಉಗ್ರ ಶಿಬಿರಗಳ ಮೇಲೆ ಎಪ್ರಿಲ್ 10ರಂದು ನಡೆಸಿದ್ದ ಪ್ರತೀಕಾರ ದಾಳಿಯಲ್ಲಿ 15 ಪಾಕ್ ಯೋಧರು, 8 ಉಗ್ರಗಾಮಿಗಳು ಹಾಗೂ ಇತರೇ ಇಬ್ಬರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ.. ಸೆಕ್ಯುರಿಟಿ ಬಿಡಲಿಲ್ಲ ಅಂತ ಸ್ನೇಹಿತನನ್ನು ಸೂಟ್’ಕೇಸ್’ನಲ್ಲಿರಿಸಿ ಅಪಾರ್ಟ್’ಮೆಂಟ್’ಗೆ ಕರೆತಂದ … ಪೊಲೀಸರ ಅತಿಥಿಯಾದ

Related posts