ಕೊರೋನಾ ಪೀಡಿತ ಗಾಯಕಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ದೆಹಲಿ: ಚೀನೀ ವೈರಸ್ ಕೊರೋನಾ ಮಹಾಮಾರಿ ಭಾರತದಲ್ಲೇ ನೂರಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿದೆ. ಕಳೆದೊಂದು ತಿಂಗಳಲ್ಲಿ ಭಾರತವನ್ನು ಭೀತಿಯ ಛಾಯೆಯಡಿ ತಳ್ಳಿರುವ ಕೋವಿಡ್-19 ಇದೀಗ ಅಟ್ಟಹಾಸವನ್ನೇ ಮೆರೆಯುತ್ತಿದೆ.

ಇದೇ ವೇಳೆ, ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಾಲ್ಕೈದು ಬಾರಿ ಅವರನ್ನು ಪರೀಕ್ಷೆಗೆ ಗುರಿಪಡಿಸಿದಾಗಲೂ ಅವರಲ್ಲಿ ಕೊರೋನಾ ಪಾಸಿಟಿವ್ ಕಂಡುಬರುತ್ತಿತ್ತು. ಹಾಗಾಗಿ ಕನಿಕಾ ಕಪೂರ್ ಅವರಿಗೆ ಲಕ್ನೊದ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಪರಿಣಾಮಕಾರಿ ಲಾಕ್ ಡೌನ್

ಈ ಮಧ್ಯೆ, ಸೋಂಕಿತರ ಸಂಖ್ಯೆ ಬಹಳಷ್ಟು ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿದೆ. ಆದರೆ ಲಾಕ್ ಡೌನ್ ಜಾರಿಯಲ್ಲಿರುವುದರಿಂದಾಗಿ ಸೋಂಕು ಹರಡುವ ಪ್ರಮಾಣ ಮಾತ್ರ ಕಡಿಮೆಯಿದೆ. ಆದರೂ ಸಾವಿನ ಪ್ರಮಾಣವನ್ನು ಗಮನಿಸಿದರೆ ನಾವೆಷ್ಟು ಸೇಫ್ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಭಾನುವಾರ ಮತ್ತೆ ನಾಲ್ವರು ಕೊರೋನಾ ಸೋಂಕಿತರು ಬಲಿಯಾಗುವುದರೊಂದಿಗೆ ಸಾವನ್ನಪಿದವರ ಸಂಖ್ಯೆ 109 ಕ್ಕೇರಿದೆ. ಭಾನುವಾರ ಸುಮಾರು 505 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.

Related posts