ಇತ್ತೀಚಿನ ವರ್ಷಗಳಲ್ಲಿ ಭಾರತದ ಪ್ರಧಾನಿಯ ಹೆಸರು ಜಾಗತಿಕ ನಾಯಕರ ನಡುವೆ ನಿರಂತರ ಚರ್ಚೆಯಲ್ಲಿ ಬರುತ್ತಲೇ ಇದೆ. ಇದೀಗ ಕೊರೋನಾ ಕಾಲದಲ್ಲೂ ಕೂಡಾ ನರೇಂದ್ರ ಮೋದಿ ಹೆಸರು ಕುತೂಹಲದ ಕೇಂದ್ರಬಿಂದುವಾಗಿದೆ. ಅದರಲ್ಲೂ ಕೋವಿಡ್-19 ವೈರಾಣು ಹರಡುವಿಕೆ ತಡೆಯಲು ಮೋದಿಯವರು ಲಾಕ್’ಡೌನ್ ಕುರಿತು ಕೈಗೊಂಡ ಕ್ರಮದ ರೀತಿ ಜಾಗತೀಕ ಕೂಡಾ ದಿಗ್ಗಜರ ಮೆಚ್ಚುಗೆಗೆ ಪಾತ್ರವಾಗಿದೆ.
ಇದೆ ವೇಳೆ, ಕೊರೋನಾ ವಿಚಾರದಲ್ಲಿ ವಿವಿಧ ದೇಶಗಳು ಕೈಗೊಂಡ ಕ್ರಮಗಳು ಹಾಗೂ ಅದರ ಹಿಂದಿನ ಸೂತ್ರಧಾರರ ಬಗ್ಗೆ ನಡೆದ ಸಮೀಕ್ಷೆಯಲ್ಲೂ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ‘ರಣವಿಕ್ರಮ’ನೆನಿಸಿದ್ದಾರೆ.
ಹೌದು, ಚೀನಾದಲ್ಲಿ ಸೃಷ್ಟಿಯಾಯಿತೆನ್ನಲಾದ ಕೊರೋನಾ ಜಗತ್ತಿನಾದ್ಯಂತ ಪರ್ಯಟನೆ ಕೈಗೊಂಡು ಭೀಕರ ಮಾರಣಹೋಮವನ್ನೇ ನಡೆಸಿದೆ. ಎಲ್ಲಾ ರಾಷ್ಟ್ರಗಳೂ ಈ ಬಗ್ಗೆ ಚಿಂತಾಕ್ರಾಂತವಾಗಿದ್ದಾಗಲೇ ಭಾರತದಲ್ಲಿ ಆ ಮಾರಕ ವೈರಾಣುವಿನ ಮೂಲೋಚ್ಚಾಟನೆಗೆ ಕ್ರಮ ಅನುಸರಿಸಲಾಯಿತು. ಈ ರೀತಿ ಕ್ರಮಕ್ಕೆ ಮುನ್ನುಡಿ ಬರೆದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್-19 ಸೋಂಕಿಗೆ ಕಡಿವಾಣ ಹಾಕಲು ಕ್ರಮ ಕೈಗೊಂಡ ವಿಶ್ವ ನಾಯಕರ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ.
ಈ ಕುರಿತಂತೆ ಅಮೆರಿಕದ ಮಾರ್ನಿಂಗ್ ಕನ್ಸಲ್ಟ್ ಏಜೆನ್ಸಿ ಸಮೀಕ್ಷೆ ನಡೆಸಿದೆ. ಜನವರಿ 1ರಿಂದ ಏಪ್ರಿಲ್ ತಿಂಗಳವರೆಗೆ ವಿವಿಧ ದೇಶಗಳು ಕೈಗೊಂಡ ವಿವಿಧ ಕ್ರಮಗಳ ಬಗ್ಗೆ ಅಧ್ಯಯನ, ಸಂಶೋಧನೆ ನಡೆಸಿ ಪಟ್ಟಿಯೊಂದನ್ನು ಸಿದ್ಧಪಡಿಸಿದೆ. ಈ ಪೈಕಿ ಮೋದಿ ಕೈಗೊಂಡ ಕ್ರಮಗಳೇ ಅತ್ಯಂತ ಪರಿಣಾಮಕಾರಿಯಾಗಿದೆ ಎನ್ನುವ ಮೂಲಕ ಮತ್ತೊಂದು ಖ್ಯಾತಿಯ ಕಿರೀಟವನ್ನು ತೊಡಿಸಿದೆ.
ಈ ಸಮೀಕ್ಷೆಯ ಪಟ್ಟಿಯ ಮೊದಲ 3 ದೇಶಗಳ ವಿವರ ಹೀಗಿದೆ.
- ನಂ-1: ಭಾರತ ಪ್ರಧಾನಿ ನರೇಂದ್ರ ಮೋದಿ (68 ಪಾಯಿಂಟ್ಸ್)
- ನಂ-2: ಮೆಕ್ಸಿಕೋ ಅಧ್ಯಕ್ಷ ಆಂದ್ರೆಸ್ ಮನ್ಯು ಯೆಲ್ ಲೊಪೇಜ್ ಒಬ್ರಾಂಡನ್ (39 ಪಾಯಿಂಟ್ಸ್)
- ನಂ-3: ಯು.ಕೆ. ಪ್ರಧಾನಿ ಬೋರಿಸ್ ಜಾನ್ಸನ್ (35 ಪಾಯಿಂಟ್ಸ್)